ಜಿಲ್ಲೆ

ವಿಮೆ ಸೌಲಭ್ಯ ಸದುಪಯೋಗವಾಗಲಿ

ಎ. ಆರ್. ರಘುರಾಮ

ಬೇಲೂರು : ಕಾರ್ಮಿಕ ಇಲಾಖೆ ಹಾಗೂ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಸಹಯೋಗದೊಂದಿಗೆ ಬೇಲೂರಿನ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾ ವಿತರಕರ ವಿಮೆ ನೋಂದಣಿ ಪ್ರತಿಕ್ರಿಯೆ ನಡೆಸಲಾಯಿತು.
ಹಿರಿಯ ಕಾರ್ಮಿಕ ನಿರೀಕ್ಷಕ ವಿಜಯ ಕುಮಾರ್ ನೋಂದಣಿಗೆ ಚಾಲನೆ ನೀಡಿ ಮಾತನಾಡಿ, ಅಸಂಘಟಿತ ಕಾರ್ಮಿಕರಾಗಿ ದುಡಿಯುತ್ತಿರುವ ವಿವಿಧ ವೃತ್ತಿನಿರತರಿಗೆ ಹಲವು ಸೌಲಭ್ಯಗಳನ್ನು ಸರ್ಕಾರ ಜಾರಿಗೆ ತಂದಿದೆ. ಹಾಗೆಯೇ ಅಸಂಘಟಿತ ವಲಯ ವ್ಯಾಪ್ತಿಗೆ ಬರುವ ಪತ್ರಿಕಾ ವಿತರಕರಿಗೂ ಸೌಲಭ್ಯ ಒದಗಿಸಲು ಸರ್ಕಾರ ವಿಮೆ ಸೌಲಭ್ಯ ಕಲ್ಪಿಸಿದೆ. ಅದನ್ನು ಎಲ್ಲ ಪತ್ರಿಕಾ ವಿತರಕರು ಸದುಪಯೋಗ ಪಡಿಸಿ ಕೊಳ್ಳಬೇಕಿದೆ ಎಂದರು.
ದಿನಪತ್ರಿಕೆಗಳನ್ನು ವಿತರಿಸುವ ಕಾರ್ಮಿಕರು ದ್ವಿಚಕ್ರ ವಾಹನಗಳನ್ನು ಬಳಸುವುದರಿಂದ ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಪತ್ರಿಕಾ ವಿತರಕರಿಗೆ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಪಡೆದು ಕೊಳ್ಳುವುದಕ್ಕೆ ಈ ಯೋಜನೆ ಸಹಕಾರಿಯಾಗಿದೆ ಎಂದರು. ಕಚೇರಿ ಸಿಬ್ಬಂದಿ ಇದ್ದರು.