ಹಾನಗಲ್ಲ: ಹವಾಮಾನ ಆಧಾರಿತ ತೋಟಗಾರಿಕೆ ಬೆಳೆಗಳಿಗೆ ವಿಮೆ ಕಂತು ಭರಿಸುವುದು ವಿಳಂಬವಾಗಿದ್ದು, ತೋಟಗಾರಿಕೆ ಇಲಾಖೆ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ದೊರಕಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಶಾಸಕ ಶ್ರೀನಿವಾಸ ಮಾನೆ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿವರ್ಷ ಮೇ ಹಾಗೂ ಜೂನ್‌ನಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಕೆ, ಶುಂಠಿ, ಹಸಿಮೆಣಸಿಗೆ ಬೆಳೆ ವಿಮೆ ಕಂತು ಭರಿಸಲು ಅವಕಾಶ ಇರುತ್ತಿತ್ತು. ಆದರೆ, ಪ್ರಸಕ್ತ ವರ್ಷ ಜುಲೈ ಮುಗಿಯುತ್ತಾ ಬಂದರೂ ವಿಮೆ ಕಂತು ಭರಿಸಲು ಅವಕಾಶ ನೀಡಿಲ್ಲ. ವಿಮೆ ಕಂಪನಿಗಳ ಜತೆ ಚರ್ಚಿಸಿ, ಕಂತು ಭರಿಸಲು ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ತೋಟಗಾರಿಕೆ ಇಲಾಖೆ ಸಚಿವರು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮಸ್ಯೆ ಬಗೆಗೆ ಗಮನ ಸೆಳೆಯಲಾಗುವುದು ಎಂದು ಶಾಸಕ ಮಾನೆ ಭರವಸೆ ನೀಡಿದರು.
ರೈತ ಸಂಘದ ತಾಲೂಕಾಧ್ಯಕ್ಷ ರುದ್ರಪ್ಪ ಬಳಿಗಾರ, ಪದಾಧಿಕಾರಿಗಳಾದ ಬಸವಂತಪ್ಪ ಮೆಳ್ಳಳ್ಳಿ, ಚನ್ನಬಸಪ್ಪ ಹಾವಣಗಿ, ವೀರಭದ್ರಪ್ಪ ಅಗಡಿ, ಮಲ್ಲೇಶ ರಿತ್ತಿ, ಮಾರುತಿ ಜಾಡರ, ಕುಮಾರ ಹೊಸಮನಿ, ಚಂದ್ರಶೇಖರ ಬೈಲವಾಳ, ಗುರುಶಾಂತಪ್ಪ ಗುರುಸಿದ್ದನವರ, ಚಂದ್ರಶೇಖರಯ್ಯ ಹಿರೇಮಠ, ವೀರಪ್ಪ ಓಣಿಮನಿ, ಮಲ್ಲನಗೌಡ ಹೊಸಗೌಡ್ರ ಇತರರು ಉಪಸ್ಥಿತರಿದ್ದರು.