ಜಿಲ್ಲೆ

ಕರ್ಣಾಟಕ ಬ್ಯಾಂಕ್‌ನಿಂದ ವಿಮೆ ಚೆಕ್ ಹಸ್ತಾಂತರ

ಕಾರ್ಕಳ: ಇತ್ತೀಚೆಗೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಮೃತಪಟ್ಟ ಶಿವಪುರದ ಪ್ರತ್ಯಕ್ಷ ಕುವಾರ್ (23) ಅವರ ಕುಟುಂಬಕ್ಕೆ 5 ಲಕ್ಷ ರೂ. ಮೊತ್ತದ ಚೆಕ್‌ನ್ನು ಕರ್ಣಾಟಕ ಬ್ಯಾಂಕ್ ರೀಜಿನಲ್ ಹೆಡ್ ವಾದಿರಾಜ್ ಕೆ. ಹಾಗೂ ಕುಕ್ಕೆಹಳ್ಳಿ ಪಂಚಾಯಿತಿ ಅಧ್ಯಕ್ಷ ಪುರಂದರ ಕೋಟ್ಯಾನ್ ಹಸ್ತಾಂತರಿಸಿದರು. ಬ್ಯಾಂಕ್ ವ್ಯವಸ್ಥಾಪಕ ಪ್ರಸನ್ನ ಆಚಾರ್ಯ ವಾತನಾಡಿ, ಗ್ರಾಹಕರಿಕೆ ಸವಲತ್ತುಗಳನ್ನು ಒದಗಿಸಲು ಪ್ರಯತ್ನಿಸುತ್ತಿದ್ದು, ಚಿಕ್ಕ ಮೊತ್ತವೂ ಕುಟುಂಬಕ್ಕೆ ದೊಡ್ಡ ಆಸರೆಯಾಗುತ್ತದೆ ಎಂದರು. ಯುನಿವರ್ಸಲ್ ಸೋಂಪೊ ನ್ಯಾಷನಲ್ ಹೆಡ್ ಪ್ರಮೋದ್ ಅನ್ವೇರ್, ಕ್ಲಸ್ಟರ್ ಮುಖ್ಯಸ್ಥ ಚೇತನ್‌ಕುವಾರ್, ಭಾರತಿ ಎಕ್ಸ್ ಲೈಫ್ ಇನ್ಶೂರೆನ್ಸ್ ರೀಜಿನಲ್ ಹೆಡ್ ಪ್ರದೀಪ ಶೆಟ್ಟಿ ಹಾಗೂ ಬ್ಯಾಂಕ್ ಸಿಬ್ಬಂದಿ ಉಪಸ್ಥಿತರಿದ್ದರು.