ಜಿಲ್ಲೆ

ವಟುಗಳಿಗೆ ಅಯ್ಯಚಾರ, ಲಿಂಗದೀಕ್ಷೆ

ರವಿ ಎಸ್. ಬಳೂಟಗಿ

ನರಗುಂದ: ಪಟ್ಟಣದ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಪಂಚಗ್ರಹ ಗುಡ್ಡದ ಹಿರೇಮಠದಲ್ಲಿ ತುಪ್ಪದ ಕುರಹಟ್ಟಿಯ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರು, ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಜಂಗಮ ವಟುಗಳಿಗೆ ಅಯ್ಯಚಾರ, ಲಿಂಗದೀಕ್ಷೆ ನೀಡಲಾಯಿತು. ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ಆಧುನಿಕ ಯುಗದಲ್ಲಿ ಸನಾತನ ಧರ್ಮ, ಪರಂಪರೆ ಮರೆಯುತ್ತಿರುವುದು ಕಳವಳಕಾರಿ ಸಂಗತಿ. ಸಂಸ್ಕಾರಕ್ಕೆ ಹೆಚ್ಚಿನ ಒತ್ತು ಕೊಡದಿದ್ದರೆ ಪ್ರತಿ ಓಣಿಗಳಲ್ಲಿಯೂ ವೃದ್ಧಾಶ್ರಮಗಳ ತಲೆ ಎತ್ತುವ ದಿನಗಳು ದೂರವಿಲ್ಲ ಎಂದು ಎಚ್ಚರಿಸಿದರು.

23 ವಟುಗಳಿಗೆ ದೀಕ್ಷೆ ನೀಡಲಾಯಿತು. ಶೇಖರಯ್ಯ ಹಿರೇಮಠ, ಈಶ್ವರಯ್ಯ ಶಾಸ್ತ್ರೀಗಳು, ಶಂಕ್ರಯ್ಯ ಶಾಸ್ತ್ರಿಗಳು, ಈರಯ್ಯ ಹಿರೇಮಠ, ಮೃತ್ಯುಂಜಯ ಕಾಡದೇವರಮಠ, ವಿಜಯ ಶಾಸ್ತ್ರೀಗಳು ಮೃತ್ಯುಂಜಯ ಹಿರೇಮಠ, ಶಿವಶಂಕರಯ್ಯ ಹಿರೇಮಠ, ಸಂಗನಗೌಡ್ರ, ಸುಕನ್ಯಾ ಸಾಲಿ, ಮಂಜುನಾಥ ಗವಿಮಠ, ಶಾಲಿನಿ ಗವಿಮಠ, ಕಳಕಯ್ಯ, ಪ್ರಶಾಂತ ಶಾಸ್ತ್ರೀ, ನಾಗಯ್ಯ ಹಿರೇಮಠ, ಶೃತಿ ಹಿರೇಮಠ, ಅಂದಾನಯ್ಯ ಹಿರೇಮಠ, ಸಿದ್ದು ಬಾಳಿಕಾಯಿ, ಇತರರಿದ್ದರು.