ಕಮಲ್​ ಹಾಸನ್​ ಹೇಳಿಕೆ ಖಂಡಿಸಿ ಅತ್ತಿಬೆಲೆ ಗಡಿಯಲ್ಲಿ ಕನ್ನಡ ಜಾಗೃತಿ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು. ವೇದಿಕೆ ಅಧ್ಯ ಮಂಜುನಾಥ್​ ದೇವ, ಪದಾಧಿಕಾರಿಗಳಾದ ಕೆ.ನಾಗರಾಜು, ಜ್ಯೋತಿ ಕುಮಾರ್​, ಗುಡ್ಡಟ್ಟಿ ರಾಮಸ್ವಾಮಿ, ಆರ್​.ಮಧು ಕುಮಾರ್​, ಆರ್​.ಸತೀಶ್​ ರಾಜ್​ ಇದ್ದರು. 
ಜಿಲ್ಲೆ

ಮಾತೃಭಾಷೆಯನ್ನು ಅವಮಾನಿಸಿದರೆ ಸಹಿಸಲ್ಲ

ಆನೇಕಲ್​ : ಕನ್ನಡದ ಬಗ್ಗೆ ಕಮಲ್​ ಹಾಸನ್​ ಅವಿವೇಕಿತನದ ಹೇಳಿಕೆ ನೀಡಿದ್ದು, ಅಪ್ರಭುದ್ಧ ಮಾತು ಸಹಿಸಲು ಸಾಧ್ಯವಿಲ್ಲ ಎಂದು ಕನ್ನಡ ಜಾಗೃತಿ ವೇದಿಕೆ ಅಧ್ಯ ಮಂಜುನಾಥ್​ ದೇವ ಕಿಡಿ ಕಾರಿದರು.

ಕಮಲ್​ ಹಾಸನ್​ ಹೇಳಿಕೆ ಖಂಡಿಸಿ ಅತ್ತಿಬಲೆಯಲ್ಲಿ ಸೋಮವಾರ ಕನ್ನಡ ಜಾಗೃತಿ ವೇದಿಕೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ವಿರೋಧಿಸಿ ಮಾತನಾಡಿ, ಕ್ರಿಸ್ತ ಪೂರ್ವದಲ್ಲೇ ಕನ್ನಡ ಉದಯವಾಯಿತು ಎನ್ನುವ ಉಲ್ಲೆಖವಿದ್ದು, ಕನ್ನಡ ಭಾಷೆಯ ಇತಿಹಾಸದ ಬಗ್ಗೆ ತಮಿಳು ಭಾಷಾ ಸಂಶೋಧಕ ಮಹಾದೇವನ್​ ಅವರು ಸಹ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಭಾಷೆಯ ಇತಿಹಾಸ ಗೊತ್ತಿಲ್ಲದೆ ನಟ ಕಮಲ್​ ಹಾಸನ್​ ಮಾತನಾಡಿದ್ದಾರೆ. ಮಾತಿನ ತಪ್ಪನ್ನು ತಿದ್ದಿಕೊಂಡು ಕ್ಷಮೆಯಾಚಿಸದಿದ್ದರೆ ಥಗ್​ ಚಿತ್ರ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ. ಅಲ್ಲದೇ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಪರಿಣಾಮವನ್ನು ಕಮಲ್​ಹಾಸನ್​ ಎದುರಿಸಬೇಕಾಗುತ್ತದೆ ಎಂದು ಮಂಜುನಾಥ್​ ಎಚ್ಚರಿಕೆ ನೀಡಿದರು.

ಕನ್ನಡಿಗರ ಭಾವನೆ ಹಾಗೂ ಭಾಷೆಯ ಬಗ್ಗೆ ಕೆಣಕಿದರೇ ಸುಮ್ಮನಿರಲು ಸಾಧ್ಯವಿಲ್ಲ. ಕನ್ನಡದ ನಟ&ನಟಿಯರು ಕಮಲ್​ ಹಾಸನ್​ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ, ಪ್ರತಿಭಟಿಸಬೇಕು ಕಮಲ್​ಹಾಸನ್​ಗೆ ತಪ್ಪಿನ ಅರಿವು ಮೂಡಿಸಬೇಕು ಎಂದು ಆಗ್ರಹಿಸಿದರು. ಅತ್ತಿಬೆಲೆ ಸರ್ಕಲ್​ನಿಂದ ತಮಿಳುನಾಡಿನ ಗಡಿವರೆಗೆ ಕನ್ನಡಪರ ಹೋರಾಟಗಾರರು ಮೆರವಣಿಗೆ ಮೂಲಕ ಸಾಗಿ, ಕಮಲ್​ ಹಾಸನ್​ ಭಾವಚಿತ್ರ ಹರಿದು ಪ್ರತಿಭಟನೆ ನಡೆಸಿದರು. ಈ ವೇಳೆ ಭಾವಚಿತ್ರಕ್ಕೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಲು ಮುಂದಾದಾಗ ಪೊಲೀಸರು ತಡೆದರು. ಯುವ ಟಕ ಅಧ್ಯಕ್ಷ ಎಸ್​.ಕೆ.ಗೌರೀಶ್​, ರಾಜ್ಯ ಸಂಟನಾ ಕಾರ್ಯದರ್ಶಿಗಳಾದ ಗುಡ್ಡಹಟ್ಟಿ ರಾಮಸ್ವಾಮಿ, ಬಳಗಾರನಹಳ್ಳಿ ಕುಮಾರ್​, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಕೆ.ನಾಗರಾಜ, ಯುವಟಕ ಜಿಲ್ಲಾಧ್ಯಕ್ಷ ಆರ್​.ಮದುಕುಮಾರ್​, ಪದಾಧಿಕಾರಿಗಳಾದ ಆರ್​.ಸತೀಶ್​ರಾಜ್​, ರಮೇಶ್​ಗೌಡ, ಶಶಿಕುಮಾರ್​, ಗುಡ್ಡಹಟ್ಟಿ ಮಂಜುನಾಥ್​, ಇಚ್ಚಂಗೂರು ರವಿ, ಗುಡ್ಡಹಟ್ಟಿ ಶ್ರೀನಿವಾಸ್​, ಮೈಲಸಂದ್ರ ಸಂಪಂಗಿ ಇದ್ದರು.