ತಾಳಿಕೋಟೆ ಪಟ್ಟಣದ ಹುಣಸಗಿ ರಸ್ತೆಯ ಹಳ್ಳದ ದಡದಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಹನುಮಾನ ಮಂದಿರದಲ್ಲಿ ಹನುಮಾನ ಮೂರ್ತಿಯ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಿತು. ಪುರಸಭೆ ಸದಸ್ಯ ಜೈಸಿಂಗ್ ಮೂಲಿಮನಿ, ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಸಂತೋಷಭಟ್ ಜೋಶಿ ಇತರರಿದ್ದರು 
ಜಿಲ್ಲೆ

ಶ್ರೀ ಹನುಮಾನ ಮೂರ್ತಿ ಪ್ರತಿಷ್ಠಾಪನೆ

ತಾಳಿಕೋಟೆ: ಪಟ್ಟಣದ ಹುಣಸಗಿ ರಸ್ತೆಯ ಹಳ್ಳದ ದಡದಲ್ಲಿ ಪುರಸಭೆ ಸದಸ್ಯ ಜೈಸಿಂಗ್ ಮೂಲಿಮನಿ ನೇತೃತ್ವದಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಹನುಮಾನ ದೇವಸ್ಥಾನದಲ್ಲಿ ಶ್ರೀ ಹನುಮಾನ ಮೂರ್ತಿಯ ಪ್ರತಿಷ್ಠಾಪನೆ ಕಾರ್ಯಕ್ರಮ ಸೋಮವಾರ ಭಕ್ತಿಭಾವದೊಂದಿಗೆ ನೆರವೇರಿತು.

ಬೆಳಗ್ಗೆ 8 ಗಂಟೆಯಿಂದ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಸಂತೋಷಭಟ್ ಜೋಶಿ, ಗುಂಡಭಟ್ ಜೋಶಿ, ಸಂಜೀವಾಚಾರ್ಯ ಗ್ರಾಮಪುರೋಹಿತ, ಶ್ರೀಪಾದ ಜೋಶಿ, ಯಲಗೂರೇಶ ಜೋಶಿ, ರಾಘವೇಂದ್ರ ಉಡುಪಿ, ವೆಂಕಟೇಶ ಗ್ರಾಮಪುರೋಹಿತ, ರವಿ ಆಚಾರ್ಯ ಜೋಶಿ, ಕಾರ್ತಿಕ ಮಠ ಅವರಿಂದ ವಿಶೇಷ ಪೂಜೆಗಳು ನಡೆದವು. ಶ್ರೀ ಹನುಮಾನ ಮೂರ್ತಿ ಪ್ರತಿಷ್ಠಾಪನೆ ಬಳಿಕ ನವಗ್ರಹ ಪೂಜೆ, ಪವನ ಹೋಮ ಹವನ, ಪೂರ್ಣಾಹುತಿ, ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆದವು.

ಪದ್ಮಾವತಿ ಗೋವಿಂದಸಿಂಗ್ ಮೂಲಿಮನಿ ದಂಪತಿ ಮಹಾಪೂಜೆ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಮಹಾ ಪ್ರಸಾದ ವಿತರಿಸಲಾಯಿತು.