ಕುರುಗೋಡು ತಾಲೂಕಿನ ಕೋಳೂರು ಗ್ರಾಮದಲ್ಲಿ ಜಿಪಂ ಸಿಇಒ ಹ್ಯಾರಿಸ್ ಸುಮೈರ್ ಎಂಡಿ ಅವರು ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡ ರಸ್ತೆ ಕಾಮಗಾರಿ ಪರಿಶೀಲಿಸಿದರು. ಅಧಿಕಾರಿಗಳಾದ ಹರೀಶ್, ಪಕ್ಕೀರಸ್ವಾಮಿ, ಮದನಿ, ನಿರ್ಮಲಾ, ಜುಬೇದಾ, ಜಯಲಕ್ಷ್ಮೀ ಇತರರಿದ್ದರು. 
ಜಿಲ್ಲೆ

ಮಕ್ಕಳಲ್ಲಿ ಗಣಿತ-ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಿ

ರುದ್ರಪ್ಪ ವಾಲಿ

ಕುರುಗೋಡು: ಎಸ್ಸೆಸ್ಸೆಲ್ಸಿ ಫಲಿತಾಂಶ ಕಳಪೆಯಾದರೆ ಬಿಇಒ ಸೇರಿ ಇತರರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಪಂ ಸಿಇಒ ಹ್ಯಾರಿಸ್ ಸುಮೈರ್ ಎಂಡಿ ಎಚ್ಚರಿಸಿದರು.

ತಾಲೂಕಿನ ಕೋಳೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಗುರುವಾರ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿ ಮಾತನಾಡಿದರು. ಕಳೆದ ಸಾಲಿನಲ್ಲಿ ತಾಲೂಕಿನ ಕೆಲ ಶಾಲೆಗಳು ಕಳಪೆ ಸಾಧನೆ ಮಾಡಿರುವುದು ಗಮನಕ್ಕಿದೆ. ಹೀಗಾಗಿ ಶಿಕ್ಷಕರು ವಿಶೇಷ ತರಗತಿ ತೆಗೆದುಕೊಳ್ಳುವ ಜತೆಗೆ ಗಣಿತ ಮತ್ತು ವಿಜ್ಞಾನ ವಿಷಯದ ಬಗ್ಗೆ ಮಕ್ಕಳಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುವ ಕೆಲಸ ಮಾಡಬೇಕು. ಅದಕ್ಕಾಗಿ ಈಗಿನಿಂದಲೇ ಅಗತ್ಯ ಕ್ರಮ ವಹಿಸಬೇಕು ಎಂದು ಎಚ್ಚರಿಸಿದರು.

ಬಳಿಕ ಕೋಳೂರು ಮತ್ತು ಸಿಂದಗೇರಿ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡ ರಸ್ತೆ ಕಾಮಗಾರಿ ಪರಿಶೀಲಿಸಿದರು.