ಜಿಲ್ಲೆ

ಭೂಮಿಪೂಜೆ ಮಾಡಿದ್ದ ಉದ್ದೇಶವೇ ಬದಲು

ಮೈಸೂರು: ಭೂಮಿಪೂಜೆ ಮಾಡಿದ್ದ ಉದ್ದೇಶವೇ ಬದಲು ಮಾಡಲಾಗಿದೆ ಎಂದು ಶಾರದಾದೇವಿನಗರ ನಿವಾಸಿ ಜೆ.ಡಿ.ಚಿನ್ಮಯ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ನಮ್ಮ ಮನೆ ಸಮೀಪ ಈಜುಕೊಳ ನಿರ್ಮಿಸಲು ನಗರಪಾಲಿಕೆ ವತಿಯಿಂದ ಭೂಮಿಪೂಜೆ ಮಾಡಲಾಗಿತ್ತು. ಮನೆ ಬಳಿಯೇ ಈಜುಕೊಳ ನಿರ್ಮಾಣವಾಗುತ್ತಿದೆ ಎಂದು ಖುಷಿಯಾಗಿತ್ತು. ಆದರೆ ಈಜುಕೊಳ ನಿರ್ಮಾಣವಾಗಲಿಲ್ಲ. ಬದಲಿಗೆ ಭೂಮಿಪೂಜೆ ಮಾಡಿದ ಜಾಗದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗುತ್ತಿರುವುದು ಬೇಸರ ತರಿಸಿದೆ. ಈಗಲಾದರೂ ನಮ್ಮ ಬಡಾವಣೆಯಲ್ಲಿ ಈಜುಕೊಳ ನಿರ್ಮಾಣವಾಗಲಿ ಎಂದು ಒತ್ತಾಯಿಸಿದ್ದಾರೆ.