ಜಿಲ್ಲೆ

ವಾಯುಪುತ್ರ ಪ್ರತಿಮೆ ಪ್ರತಿಷ್ಠಾಪನೆ

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿ ಕರಗೂರು ಕೂಡಿಗೆ ಪಾಲಳ್ಳಿಯಲ್ಲಿ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ವಾಯುಪುತ್ರ ಪ್ರತಿಮೆಯನ್ನು ಶನಿವಾರ ಪ್ರತಿಷ್ಠಾಪನೆ ಮಾಡಲಾಯಿತು.

ಅರ್ಚಕ ಮಂಜು ಪೂಜಾ ವಿವಿಧಾನ ನೆರವೇರಿಸಿದರು. ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಭಾಗವಹಿಸಿದ್ದರು. ಮಂಜು(ತೇಜಸ್ವಿ), ವಾಯುಪುತ್ರ ಸಮಿತಿ ಸದಸ್ಯರು ಹಾಗೂ ಕರಗೂರು ಕೂಡಿಗೆ ಹಾಗೂ ಪಾಲಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.