ಸೋಮವಾರಪೇಟೆ ತಾಲ್ಲೂಕಿನ ಗರಗಂದೂರು ಗ್ರಾಮದ ಕುರುಂಬಶಂಬಿಕ ಕ್ಷೇತ್ರದಲ್ಲಿ ದೇವಿಯ ಪ್ರತಿಷ್ಠಾಪನೆ ಪೂಜೆಯನ್ನು ಕೇರಳದ ಪಯ್ಯೋಲಿ ಮಹಾವಿಷ್ಣು ಕ್ಷೇತ್ರದ ಮೇಲ್‌ಶಾಂತಿ ರಿಜೇಶ್ ನೆರವೇರಿಸಿದರು.  
ಜಿಲ್ಲೆ

ಶ್ರದ್ಧಾ ಭಕ್ತಿಯ ದೇವಿಯ ಪ್ರತಿಷ್ಠಾಪನೆ

ರವಿಕುಮಾರ್ ಪಿ. ಕೆ

ಸೋಮವಾರಪೇಟೆ: ತಾಲೂಕಿನ ಗರಗಂದೂರು ಗ್ರಾಮದ ಕುರುಂಬಶಂಬಿಕ ಕ್ಷೇತ್ರದಲ್ಲಿ ದೇವಿಯ ಪ್ರತಿಷ್ಠಾಪನೆ ಮೂರು ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ನಡೆಯಿತು.

ತ್ಯಾಗತ್ತೂರಿನ ಚಂಡೆಮೇಳದೊಂದಿಗೆ ಪರವಾರ ದೈವಗಳಾದ ವಿಷ್ಣುಮೂರ್ತಿ, ಕರಿಂಗುಟ್ಟಿಚಾತನ್, ಚಾಮುಂಡಿ, ಬೈರವ ಗುಳಿಗ ಮತ್ತು ನಾಗದೇವತೆಗಳಿಗೆ ಪೂಜೆಗಳು ನಡೆದವು. ಪ್ರತಿಷ್ಠಾ ಕರ್ಮಪೂಜೆ, ಹೋಮ ಹವನ ನಡೆದವು. ದೈವದರ್ಶನ ರಾಜನ್ ವೆಳಿಚೇಪಾಡ್ ಮತ್ತು ಕೇರಳದ ಪಯ್ಯೋಲಿ ಮಹಾವಿಷ್ಣು ಕ್ಷೇತ್ರದ ಮೇಲ್‌ಶಾಂತಿ ರಿಜೇಶ್ ನೇತೃತ್ವದಲ್ಲಿ ಎಲ್ಲ ಪೂಜಾ ಕಾರ್ಯಕ್ರಮಗಳು ನಡೆದವು. ರಾಜನ್‌ಸ್ವಾಮಿ ಅವರಿಂದ ಗುರು ಪೂಜೆ ನಡೆಯಿತು. ಪೂಜಾ ಕಾರ್ಯಕ್ಕೆ ಆಗಮಿಸಿದ ಎಲ್ಲರಿಗೂ ಅನ್ನಸಂತರ್ಪಣೆ ನಡೆಸಲಾಯಿತು.

ದೇವಾಲಯ ಸಮಿತಿಯ ಎಂ.ಎ. ಚಂದ್ರ, ಗೋಪಲಾ, ಕೃಷ್ಣ ಸೇರಿದಂತೆ ಸಮಿತಿ ಸದಸ್ಯರು ಹಾಗು ಗ್ರಾಮಸ್ಥರು ಪಾಲ್ಗೊಂಡಿದ್ದರು.