ಹೊಳೆಆಲೂರ: ಜೀವನದಲ್ಲಿ ಸಕಲ ಸಂಪತ್ತು ಸಂಪಾದಿಸಿದರೂ ಮಾನವೀಯ ಮೌಲ್ಯಗಳು ಪಾಲನೆ ಆಗದಿದ್ದರೆ ಸಮಾಜದಲ್ಲಿ ಸಮಾನತೆ ನೆಲೆಸದು. ಧರ್ಮದ ಚೌಕಟ್ಟಿನಲ್ಲಿ ಜೀವನ ನಡೆಸಿದರೆ ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದು ಬೆನಹಾಳ ಸಂಗಮೇಶ್ವರ ಮಠದ ಸದಾಶಿವ ಮಹಾಂತ ಶಿವಾಚಾರ್ಯರು ಹೇಳಿದರು.
ಗುರುವಾರ ಗ್ರಾಮದ ತೋಂಟದಾರ್ಯ ಮಠದ ಓಣಿಯ ಭರಮದೇವರ ನೂತನ ದೇವಸ್ಥಾನ ಹಾಗೂ ನಾಗದೇವತೆಯ ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಯಚ್ಚರೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಯಚ್ಚರೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ಎ.ಎನ್. ಬಡಿಗೇರ, ವಿರೂಪಾಕ್ಷಪ್ಪ ಮೆಣಸಗಿ, ಯಚ್ಚರಪ್ಪ ಪತ್ತಾರ, ಚಂದ್ರಶೇಖರಪ್ಪ ಮೆಣಸಗಿ, ವೀರಯ್ಯ ವಸ್ತ್ರದ, ಬಸವರಾಜ ಮೆಣಸಗಿ, ಕಾಶಿನಾಥ ಚಿತ್ರಗಾರ, ಗಣಪತಿ ಬಡಿಗೇರ, ನಾಗರಾಜ ಪತ್ತಾರ, ಮಲ್ಲಿಕಾರ್ಜುನ ಕಂಠಿ, ಗ್ರಾಪಂ ಮಾಜಿ ಅಧ್ಯಕ್ಷ ಸಂಗಪ್ಪ ದುಗಲದ, ಉಮೇಶ ಕವಾಸ್ತ, ರಾಘವೇಂದ್ರ ಬಡಿಗೇರ, ಆನಂದ ಸುಳ್ಳದ, ಮಲ್ಲಿಕಾರ್ಜುನ ನಿಡಗುಂದಿ, ಗಂಗಾಧರ ಮಡಿವಾಳರ, ಅಜ್ಜಯ್ಯ ಹಿರೇಮಠ, ಕುಮಾರ ಪತ್ತಾರ, ಈರಣ್ಣ ಹಿರೇಮಠ, ಇತರರಿದ್ದರು.