ಜಿಲ್ಲೆ

ವಿದೇಶದಲ್ಲೂ ಶ್ರೀ ವೆಂಕಟೇಶ ದೇವರ ಮೂರ್ತಿಗಳ ಪ್ರತಿಷ್ಠಾಪನೆ

ಹುಬ್ಬಳ್ಳಿ: ಶ್ರೀನಿವಾಸ ಕಲ್ಯಾಣ ಶ್ರವಣ ಮಾಡುವವರ ಮನೆ ಮನೆಗಳಲ್ಲಿ ವಿವಾಹದ ವೈಭವ ನಡೆಯುತ್ತಿದೆ. ಭಾರತವಷ್ಟೆ ಅಲ್ಲ, ವಿದೇಶಗಳಲ್ಲೂ ಶ್ರೀ ವೆಂಕಟೇಶ ದೇವರ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಅರ್ಚನೆಗಳು, ಕಲ್ಯಾಣೋತ್ಸವಗಳು ಸಂಭ್ರಮದಿಂದ ನಡೆಯುತ್ತಿವೆ ಎಂದು ಪ್ರವಚನಕಾರ ಪಂ. ಡಾ. ವೆಂಕಟನರಸಿಂಹಾಚಾರ್ಯ ಜೋಶಿ ಹೇಳಿದರು.

ಸತ್ತೂರಿನ ನಾರಾಯಣ ಪಾರಾಯಣ ಬಳಗದ ವತಿಯಿಂದ ಸಮೀಪದ ವನಸಿರಿ ನಗರದ ಶ್ರೀ ರಮೇಶ ಅಣ್ಣಿಗೇರಿ ನಿವಾಸದಲ್ಲಿ ಸೋಮವಾರ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಪೂರ್ವದಲ್ಲಿ ಬಳಗದ ಸುಮಂಗಲೆಯರಿಂದ 33 ತಾರತಮ್ಯ ಭಜನೆ, ಸದಸ್ಯರಿಂದ ವಿಷ್ಣುಸಹಸ್ರನಾಮಾದಿ ಪಾರಾಯಣಾದಿಗಳು ಜರುಗಿದವು.

ಪ್ರಮುಖರಾದ ರಘೂತ್ತಮ ಅವಧಾನಿ, ಕೃಷ್ಣ ಹುನಗುಂದ, ವಿಠ್ಠಲ ಅಂಬೇಕರ, ವಿಲಾಸ ಸಬನೀಸ, ಡಿ.ಕೆ. ಜೋಶಿ, ಎಲ್.ವಿ. ಜೋಶಿ, ಪ್ರೊ. ವಾಮನ ಭಾದ್ರಿ, ಸಂಜೀವ ಜೋಶಿ, ಆನಂದ ಬಾಗಲ, ರಾಘವೇಂದ್ರ ಮುಂಡಗೋಡ, ಪೊ›.ಸಿ.ಕೆ. ಕುಲಕರ್ಣಿ, ಆನಂದ ದೇಶಪಾಂಡೆ, ಶ್ರೀನಿವಾಸ ಪಟ್ಟಣಕುಡಿ, ಪಾಂಡುರಂಗ ಕುಲಕರ್ಣಿ, ಬದರಿನಾಥ ಬೆಟಗೇರಿ, ವಾದಿರಾಜಾಚಾರ್ಯ, ಗೋಪಾಲಾಚಾರ್ಯ ಹರಿಹರ, ವಿಲಾಸ ಜೋಶಿ ಇತರರು ಇದ್ದರು.