ಬೆಂಗಳೂರು: ನಾಡಿನ ಸಂಸ್ಕೃತಿ, ಕಲೆ ಹಾಗೂ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಉದ್ದೇಶದಿಂದ 'ನವರತನ್ ಜುವೆಲ್ಲರಿ' ದಸರಾ ಹಬ್ಬದ ಸಂದರ್ಭದಲ್ಲಿ ತನ್ನ ಮಳಿಗೆಗಳಲ್ಲಿ ಗೊಂಬೆಗಳನ್ನು ಪ್ರತಿಷ್ಠಾಪಿಸಿದೆ.
ದಸರಾ ಹಬ್ಬ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಜಗತ್ತಿಗೆ ಪರಿಚಯಿಸುತ್ತಿದೆ. ಈ ಸಂದರ್ಭದಲ್ಲಿ ಇದೇ ಮೊದಲ ಬಾರಿಗೆ ಚಿನ್ನಾಭರಣ ಮಳಿಗೆಯೊಂದು ದಸರಾ ಗೊಂಬೆಗಳನ್ನು ಪ್ರತಿಷ್ಠಾಪಿಸಿದೆ. 'ನವರತನ್' ಸಿಬ್ಬಂದಿ ಮುತುವರ್ಜಿಯಿಂದ ದಸರಾ ಗೊಂಬೆಗಳನ್ನು ಅಚ್ಚುಕಟ್ಟಾಗಿ ಕೂರಿಸಿದ್ದಾರೆ. ಇದರೊಂದಿಗೆ 'ನವರತನ್ ಜುವೆಲ್ಲರಿ'ಯ ಎಂ.ಜಿ.ರಸ್ತೆ, ಜಯನಗರ, ರಾಜಾಜಿನಗರ, ಯಲಹಂಕ ಶಾಖೆಗಳಲ್ಲಿ ಸಂಭ್ರಮದಿಂದ ದಸರಾ ಹಬ್ಬ ಆಚರಿಸಲಾಗುತ್ತಿದೆ.
ಕ್ರಿಕೆಟ್, ಭಾರತೀಯ ಸೇನೆ, ನವರಾತ್ರಿ ಆಚರಣೆ, ನವ ದುರ್ಗೆಯರ ಕಥೆಗಳು ಪರಿಕಲ್ಪನೆಯಲ್ಲಿ ಗೊಂಬೆಗಳನ್ನು ಕೂರಿಸಲಾಗಿದೆ. ಪ್ರತಿ ದಿನ ಸಂಜೆ ಗ್ರಾಹಕರಿಂದಲೇ ಪೂಜೆ ನೆರವೇರಿಸಿ, ಪ್ರಸಾದ ವಿತರಿಸಲಾಗುತ್ತಿದೆ.
ವಿವಿಧ ಕಲ್ಪನೆಗಳಲ್ಲಿ ದಸಾರ ಗೊಂಬೆಗಳನ್ನು ಪ್ರತಿಷ್ಠಾಪಿಸಿರುವುದು ಆಕರ್ಷಕವಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಗ್ರಾಹಕರು ಮಳಿಗೆಗಳಿಗೆ ಭೇಟಿ ನೀಡಿ ಗೊಂಬೆಗಳನ್ನು ವೀಸಬಹುದು. ಅಂತೆಯೇ ಹಬ್ಬದ ವೈಭವ ಹೆಚ್ಚಿಸುವಂತಹ ಆಕರ್ಷಕ ಆಭರಣಗಳ ಸಂಗ್ರಹಗಳನ್ನೂ ವೀಸಬಹುದು ಎಂದು 'ನವರತನ್ ಜುವೆಲ್ಲರಿ' ತಿಳಿಸಿದೆ.