ಮಂತ್ರಾಲಯದ ಹೊರವಲಯದ ಅಭಯ ಆಂಜಿನೇಯ ಮೂರ್ತಿ ಎದುರಿನ ಪ್ರದೇಶದಲ್ಲಿ 33 ಅಡಿ ಎತ್ತರದ ಶ್ರೀ ಅಭಯ ರಾಮನ ಮೂರ್ತಿಯನ್ನು ಕ್ರೇನ್ ಮೂಲಕ ಶನಿವಾರ ಮೂರ್ತಿಯನ್ನು ಮಂಟಪದ ಮೇಲೆ ಕೂಡಿಸಲಾಗಿದೆ. 
ಜಿಲ್ಲೆ

ಮಂತ್ರಾಲಯದಲ್ಲಿ ಅಭಯ ರಾಮನ ಮೂರ್ತಿ ಪ್ರತಿಷ್ಠಾಪನೆ

ರಾಯಚೂರು: ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆಗೆ ಐತಿಹಾಸಿಕ ಘಟನೆಯ ಸಂದರ್ಭದಲ್ಲಿಯೇ ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರಸ್ವಾಮಿ ಮಠದಿಂದ 36 ಅಡಿ ಎತ್ತರದ ಶ್ರೀ ಅಭಯ ರಾಮನ ಶಿಲಾ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.
ಮಂತ್ರಾಲಯದಿಂದ 2 ಕಿ.ಮೀ. ಅಂತರದಲ್ಲಿರುವ ರಾಯಚೂರು ರಸ್ತೆಯಲ್ಲಿರುವ ಅಭಯ ಆಂಜಿನೇಯ ಮೂರ್ತಿಯ ಎದುರಿನ ಆರು ಎಕರೆ ಪ್ರದೇಶದಲ್ಲಿ ಶಿಲಾ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಕೆತ್ತನೆಗೊಂಡಿರುವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಜ.22ರಂದು ಶ್ರೀಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ವಿಶೇಷ ಪೂಜೆ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಒಂದೇ ಶಿಲೆಯಲ್ಲಿ 36 ಅಡಿ ಎತ್ತರದ ಅಭಯ ರಾಮನ ಮೂರ್ತಿಯನ್ನು 10 ಜನ ಶಿಲ್ಪಿಗಳು ಕಳೆದ ಒಂದು ವರ್ಷದಿಂದ ಕೆತ್ತನೆ ಆರಂಭಿಸಿದ್ದು, ಮೂರ್ತಿಗೆ ಅಂತಿಮ ರೂಪ ನೀಡಿಲಾಗಿದೆ. ಶನಿವಾರ ಶಾಂತಿ ಹೋಮ ನಡೆಸಿ ಮೂರ್ತಿ ಮಂಟಪದ ಮೇಲೆ ಕೂಡಿಸಲಾಗಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಅಭಯ ರಾಮನ ಮೂರ್ತಿಗೂ ಶ್ರೀಗಳು ವಿಶೇಷ ಪೂಜೆ ಸಲ್ಲಿಸುತ್ತಿದ್ದು, ನಂತರದ ದಿನಗಳಲ್ಲಿ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಡೆಸಲು ಶ್ರೀಮಠ ಯೋಜನೆ ಹಾಕಿಕೊಂಡಿದೆ.