Internal purification by fasting 
ಜಿಲ್ಲೆ

"ಐಎಪಿ' ಟಕದ ಅನುಸ್ಥಾಪನಾ ಸಮಾರಂಭ

ಗಿರೀಶ ಸಗರ

ವಿಜಯಪುರ: ನಗರದ ಬಿಎಲ್​ಡಿಇ ಡೀಮ್ಡ್​ ವಿಶ್ವವಿದ್ಯಾಲಯದ ಶ್ರೀ ಬಿ.ಎಂ. ಪಾಟೀಲ ವೈದ್ಯಕಿಯ ಆಸ್ಪತ್ರೆಯ ಟ್ರಾಮಾ ಸೆಂಟರ್​ನ ಸಭಾಂಗಣದಲ್ಲಿ ಜ.5 ರಂದು ಬೆಳಗ್ಗೆ 11ಕ್ಕೆ ಇಂಡಿಯನ್​ ಅಕಾಡೆಮಿ ಆಫ್​ ಪೆಡಿಯಾಟ್ರಿಕ್ಸ್​ (ಐಎಪಿ) ಕರ್ನಾಟಕ ರಾಜ್ಯ ಟಕ&2025 ರ ಅನುಸ್ಥಾಪನಾ ಸಮಾರಂಭ ನಡೆಯಲಿದೆ.

ಇಂಡಿಯನ್​ ಅಕಾಡೆಮಿ ಆಫ್​ ಪೆಡಿಯಾಟ್ರಿಕ್ಸ್​ (ಐಎಪಿ) ಕರ್ನಾಟಕ ರಾಜ್ಯ ಟಕದ ನೂತನ ಅಧ್ಯರಾಗಿ ಡಾ.ಎಸ್​.ವಿ. ಪಾಟೀಲ, ಕಾರ್ಯದರ್ಶಿಯಾಗಿ ಡಾ. ಸಿದ್ದು ಚರ್ಕಿ ಹಾಗೂ ಇತರ ಸದಸ್ಯರು ಹೊಸ ಪದಾಧಿಕಾರಿಗಳಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.

ಜಿಲ್ಲಾಧಿಕಾರಿ ಟಿ. ಭೂಬಾಲನ್​, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಐಎಪಿ ರಾಷ್ಟ್ರೀಯ ಅಧ್ಯ ಡಾ. ಜಿ.ವಿ. ಬಸವರಾಜ ಹಾಗೂ ಡಾ. ಎಲ್​.ಎಚ್​. ಬಿದರಿ, ಬೆಳಗಾವಿಯ ಕೆಎಲ್​ಇ ಅಕಾಡೆಮಿ ಆಫ್​ ಹೈಯರ್​ ಎಜುಕೇಶನ್​ ಆಂಡ್​ ರಿಸರ್ಚ್​ನ ಹೊಸ ಯೋಜನೆಗಳ ನಿರ್ದೇಶಕ ಡಾ. ವಿ.ಡಿ. ಪಾಟೀಲ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಡಾ. ಪರೀತ ಕೋಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.