ರಿಪ್ಪನ್‌ಪೇಟೆ: ಅರಸಾಳು, ಕೆಂಚನಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಾಳಗುಪ್ಪ- ಬೆಂಗಳೂರು-ಮೈಸೂರು ರೈಲ್ವೆ ಮಾರ್ಗದ ಅಂಡರ್ ಪಾಸ್ ಎರಡೂ ಬದಿಗಳಲ್ಲಿ ಸೋಲಾರ್ ದೀಪ ಅಳವಡಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಹೊಸನಗರ ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ವಿ.ಈಶ್ವರಪ್ಪಗೌಡ ಒತ್ತಾಯಿಸಿದ್ದಾರೆ.
9ನೇ ಮೈಲಿಕಲ್ಲು, ಕೆಂಚನಾಲ, ಮಸರೂರು, ನೆವಟೂರು ಮತ್ತು ಅಂದಾಸುರ ಸೇರಿದಂತೆೆ ಹಲವು ಕಡೆಗಳಲ್ಲಿ ರೈಲ್ವೆ ಅಂಡರ್ ಪಾಸ್ ನಿರ್ಮಿಸಲಾಗಿದ್ದು ರಾತ್ರಿ ಸಮಯದಲ್ಲಿ ಸಾರ್ವಜನಿಕರು, ಪಾದಚಾರಿಗಳಿಗೆ ಓಡಾಡಲು ತೊಂದರೆ ಹಾಗೂ ವಾಹನಗಳ ಅಪಘಾತವಾಗುತ್ತಿದೆ. ಇಲ್ಲಿ ಸೋಲಾರ್ ದೀಪವನ್ನು ಅಳವಡಿಸಿದರೆ ಸಾರ್ವಜನಿಕರಿಗೆ ಸುಗಮಸಂಚಾರ ಕಲ್ಪಿಸಿದಂತಾಗುತ್ತದೆ ಎಂದು ಪತ್ರ ಬರೆದು ವಿವರಿಸಿದ್ದಾರೆ.