ಜಿಲ್ಲೆ

ಕಾಣಿಯೂರು ಪೇಟೆಯಲ್ಲಿ ಹಂಪ್ಸ್ ಅಳವಡಿಸಿ : ಗ್ರಾಪಂ ಸಾಮಾನ್ಯ ಸಭೆಯಲ್ಲಿ ಒತ್ತಾಯ

ಕಡಬ: ಕಾಣಿಯೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಗ್ರಾಪಂ ಅಧ್ಯಕ್ಷ ವಿಶ್ವನಾಥ ಕೊಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು

ಕಾಣಿಯೂರು ಪೇಟೆ ಆರಂಭದಿಂದ ಮತ್ತು ಕಾಣಿಯೂರು ಪ್ರಯಾಣಿಕರ ತಂಗುದಾಣ ಎದುರು ಹಂಪ್ಸ್ ಅಳವಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಬರೆಯಲು ಸದಸ್ಯ ಗಣೇಶ್ ಉದನಡ್ಕ ಒತ್ತಾಯಿಸಿದರು.

ಜಲಜೀವನ್ ಮಿಷನ್ ಯೋಜನೆಯಲ್ಲಿ ಮುಕ್ತಾಯಗೊಂಡ ಕಾಮಗಾರಿಯ ಹಸ್ತಾಂತರ ಪಡೆಯಲು ಸಂಬಂಧಪಟ್ಟ ಇಲಾಖೆಯಿಂದ ಪತ್ರ ಬಂದಿರುವುದನ್ನು ಪ್ರಸ್ತಾಪಿಸಲಾಯಿತು. ಕಾಮಗಾರಿ ಪರಿಶೀಲಿಸಿ ಕಾಮಗಾರಿ ಸಮರ್ಪಕವಾಗಿದ್ದಲ್ಲಿ ಹಸ್ತಾಂತರ ಪಡೆಯುವುದಾಗಿ ನಿರ್ಣಯ ಕೈಗೊಳ್ಳಲಾಯಿತು.

ಗ್ರಾಪಂ ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ, ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ಲೋಕಯ್ಯ ಪರವ ದೋಳ್ಪಾಡಿ, ಪ್ರವೀಣ್ ಚಂದ್ರ ರೈ ಕುಮೇರು, ವಸಂತ ಪೆರ್ಲೋಡಿ, ತಾರಾನಾಥ ಇಡ್ಯಡ್ಕ, ದೇವಿಪ್ರಸಾದ್ ದೋಳ್ಪಾಡಿ, ಸುಲೋಚನಾ ಮಿಯೋಳ್ಪೆ, ತೇಜಕುಮಾರಿ ಉದ್ಲಡ್ಡ, ಲಲಿತಾ ದರ್ಖಾಸು, ಕೀರ್ತಿ ಕುಮಾರಿ ಅಂಬುಲ, ಮೀರಾ ಕಳೆಂಜೋಡಿ, ಸುನಂದಾ ಅಬ್ಬಡ, ಅಂಬಾಕ್ಷಿ ಕೂರೇಲು ಉಪಸ್ಥಿತರಿದ್ದರು.

ಪಿಡಿಒ ರಘು ಎನ್.ಬಿ. ಸಭೆ ನಿರ್ವಹಿಸಿದರು. ಸಿಬ್ಬಂದಿ ತಿಮ್ಮಪ್ಪ ಗೌಡ ಬೀರುಕುಡಿಕೆ ಇಲಾಖೆಯ ಸುತ್ತೋಲೆ, ಸಾರ್ವಜನಿಕ ಅರ್ಜಿ ಓದಿದರು. ಪಂಚಾಯಿತಿ ಸಿಬ್ಬಂದಿ ಚಿತ್ರಾ, ಕುಮಾರ್, ಶಶಿಕಲಾ, ರಕ್ಷಿತ್, ಪಾರ್ವತಿ ಸಹಕರಿಸಿದರು.

ಅಧಿಕಾರಿಗಳಿಗೆ ಮನವಿಗೆ ನಿರ್ಣಯ

ಕಾಣಿಯೂರು ಗ್ರಾಪಂ ವ್ಯಾಪ್ತಿಯ ಚಾರ್ವಾಕ ಮತ್ತು ದೋಳ್ಪಾಡಿ ಗ್ರಾಮಗಳಿಗೆ ಶಾಲಾ ಸಮಯದಲ್ಲಿ ಬರುತ್ತಿರುವ ಕೆಎಸ್‌ಆರ್‌ಟಿಸಿ ಬಸ್ಸನ್ನು ನಿಲ್ಲಿಸಿರುವ ಕುರಿತು ಪ್ರಸ್ತಾಪಗೊಂಡು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡುವುದೆಂದು ನಿರ್ಣಯ ಕೈಗೊಳ್ಳಲಾಯಿತು.