ತಾಳಿಕೋಟೆ: ಸಿಸಿ ಟಿವಿ ಅಳವಡಿಸಿಕೊಳ್ಳದೆ ದೈನಂದಿನ ವ್ಯಾಪಾರ ವೈಹಿವಾಟದಲ್ಲಿ ತೊಡಗಿಕೊಂಡಿದ್ದ ನೂರಾರು ಅಂಗಡಿಕಾರರಿಗೆ ಭಾನುವಾರ ಸಿಪಿಐ ಮಹ್ಮದ್‌ಪಶುವುದ್ದೀನ್ ನೇತೃತ್ವದಲ್ಲಿ ಅಧಿನಿಯಮ -2017ರ ಅಡಿ ನೋಟಿಸ್ ನೀಡಲಾಯಿತು.
ಈಗಾಗಲೇ ಸರ್ಕಾರವು 2017ರ ಸಾರ್ವಜನಿಕ ಸುರಕ್ಷತಾ ಅಧಿನಿಯಮದಡಿ ತಮ್ಮ ತಮ್ಮ ಅಂಗಡಿಗಳಿಗೆ ಸಿಸಿ ಟಿವಿ ಅಳವಡಿಸಿಕೊಳ್ಳಲು ಸೂಚಿಸಿದೆ. ಆದರೂ ಇನ್ನೂವರೆಗೂ ನೂರಾರು ಅಂಗಡಿಕಾರರು ಸಿಸಿ ಟಿವಿಗಳನ್ನು ಅಳವಡಿಸಿಕೊಂಡಿಲ್ಲ. ಶೀಘ್ರ ವಾರಾಂತ್ಯದಲ್ಲಿ ಅಂಗಡಿ ಒಳಗೆ ಹಾಗೂ ಹೊರಗೆ ಸಿಸಿ ಟಿವಿ ಅಳವಡಿಸಿಕೊಳ್ಳಬೇಕೆಂದು ಎಚ್ಚರಿಸಿದರಲ್ಲದೆ, ಕರ್ನಾಟಕ ರಾಜ್ಯ ಸರ್ಕಾರದ ಕರ್ನಾಟಕ ಸಾರ್ವಜನಿಕ ಸುರಕ್ಷತೆಯ ಅಧಿನಿಯಮದಡಿ ನೋಟಿಸ್ ನೀಡಿದರು.
ಪಿಎಸ್‌ಐ ರಾಮನಗೌಡ ಸಂಕನಾಳ, ಅಪರಾಧ ವಿಭಾಗ ಪಿಎಸ್‌ಐ ಆರ್.ಎಸ್. ಭಂಗಿ, ಎಎಸ್‌ಐ ಪರಶುರಾಮ ದೊಡಮನಿ, ಬಾಗೇವಾಡಿ, ಸಿ.ಎಸ್. ಭಂಗಿ, ಎಂ.ಎಲ್. ಪಟ್ಟೇದ, ಬಸವರಾಜ ದೊಡಮನಿ, ಮಂಜುನಾಥ ಯಾಳಗಿ, ಶಶಿಧರ ರಡ್ಡಿ, ಪೊಲೀಸ್ ಸಿಬ್ಬಂದಿ ಇದ್ದರು.
ಕರ್ನಾಟಕ ಸಾರ್ವಜನಿಕ ಸುರಕ್ಷತೆ ಅಧಿನಿಯಮದ ಪ್ರಕಾರ ಸಿಸಿ ಟಿವಿ ಅಳವಡಿಸಿಕೊಳ್ಳದ ಅಂಗಡಿಕಾರರಿಗೆ ನೋಟಿಸ್ ನೀಡಿ ಒಂದು ವಾರ ಅವಕಾಶ ನೀಡಿದ್ದೇವೆ. ತಪ್ಪಿದಲ್ಲಿ 10 ಸಾವಿರ ರೂ. ದಂಡದೊಂದಿಗೆ ಕಾನೂನು ಕ್ರಮ ಅನಿವಾರ್ಯವಾಗಲಿದೆ.
ಮಹ್ಮದ ಪಶುವುದ್ದೀನ್ ಸಿಪಿಐ ಮುದ್ದೇಬಿಹಾಳ
....................................................................