ವಿಜಯಪುರ: ಕನ್ನಡ ಸಾಹಿತ್ಯದಲ್ಲಿ ಪರಧರ್ಮ ಪರ ವಿಚಾರಗಳನ್ನು ಸ್ಮರಿಸುವ ಸಹಿಷ್ಣುತೆಯನ್ನು ಸಾರುತ್ತ ಕುಲದ ಮರು ವ್ಯಾಖ್ಯಾನ ಮಾಡಿ ಸಾಮಾನ್ಯನಿಗೆ ಆತ್ಮ ಗೌರವದಿಂದ ಬದುಕುವಂತೆ ಕನಕದಾಸರ ಕೀರ್ತನೆಗಳು ಮಾಡಿವೆ ಎಂದು ಶಾಂತಿನಿಕೇತನ ಅಂತಾರಾಷ್ಟ್ರೀಯ ಶಾಲೆ ಪ್ರಾಚಾರ್ಯ ರಿಜೇಶ ಪಿ.ಎನ್., ಹೇಳಿದರು.
ನಗರದ ಶಾಂತಿನಿಕೇತನ ಅಂತಾರಾಷ್ಟ್ರೀಯ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಸಕದಾಸ ಜಯಂತಿಯಲ್ಲಿ ಮಾತನಾಡಿದ ಅವರು, ಇಂದಿನ ಯುವಜನತೆಗೆ ಭಕ್ತ ಕನಕದಾಸರ ಕೃತಿಗಳ ಮೌಲ್ಯಗಳು ಅವಶ್ಯಕ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಂದ ಸಾಂಸತಿಕ ಕಾರ್ಯಕ್ರಮಗಳು ನೆರವೇರಿದವು. ಶೈಕ್ಷಣಿಕ ಕಾರ್ಯ ಸಂಯೋಜಕಿ ಕಮರ್ಪಾರಾ ಖಾಜಿ ಮತ್ತಿತರರಿದ್ದರು.