ಹುಬ್ಬಳ್ಳಿ: "ನೀವು ಹೇಳೋದು ಎಲ್ಲ ಪುಂಗಿ ನಮ್ಮ ಪುಂಗಿ ಮುಂದೆ ನಿಮ್ಮ ಪುಂಗಿ ನಡೆಯಂಗಿಲ್ಲ' ಎಂದು ಡಿಜೆ ಹಚ್ಚುವ ಕುರಿತು ಗಣೇಶೋತ್ಸವ ಶಾಂತಿ ಸಭೆಯಲ್ಲಿ ಬೆಂಡಿಗೇರಿ ಠಾಣೆ ಇನ್ಸ್ಪೆಕ್ಟರ್ ಶ್ಯಾಮರಾವ ಸಜ್ಜನ ಎಚ್ಚರಿಕೆ ನೀಡಿರುವ ವಿಡಿಯೋ ವೈರಲ್ ಆಗಿದೆ.
ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಸುಪ್ರೀಂಕೋರ್ಟ್ ಆದೇಶ ಮೀರಿ ಡಿಜೆಗೆ ಅವಕಾಶ ನೀಡುವುದಿಲ್ಲ. ನಾವು ನಮ್ಮ ಪುಂಗಿ ಊದುತ್ತೇನೆ. ನಮ್ಮ ಪಿಂಗಿ ಮುಂದೆ ನಿಮ್ಮ ಪುಂಗಿ ನಿಲ್ಲಲ್ಲ. ನಾಳೆ ನಡೆಯಲಿಲ್ಲ ಎಂದರೂ ನಂತರ ಕೋರ್ಟ್ನಿಂದ ಸಮನ್ಸ್ ಬರುತ್ತಲ್ಲ. ನೀವು ಡಿಜೆ ಹಚ್ಚಿದರೆ ಜೇಬಲ್ಲಿ ಇಟ್ಟುಕೊಂಡು ಹಚ್ಚುತ್ತೀರಾ ? ಯಾವ ಡಿಜೆ ? ಅದರ ಮಾಲೀಕ ಯಾರು ? ಆಪರೇಟರ್ ಯಾರು ? ಟ್ರಾ$್ಯಕ್ಟರ್ ಮಾಲೀಕ, ಚಾಲಕ ಯಾರು ? ಎಂಬ ಎಲ್ಲ ಮಾಹಿತಿ ಗೊತ್ತಾಗುತ್ತೆ. ನಂತರ ಸಮಸ್ಯೆ ಸೃಷ್ಟಿಯಾಗುತ್ತೆ ಎಂದು ಸಜ್ಜನ ಅವರು ಡಿಜೆ ಬೇಕೇ ಬೇಕು ಎಂಬ ಯುವಕರಿಗೆ ಎಚ್ಚರಿಕೆ ನೀಡಿದ್ದ ವಿಡಿಯೋ ಜಾಲತಾಣದಲ್ಲಿ ಎಲ್ಲೆಡೆ ಹರಿದಾಡುತ್ತಿದೆ.