ಸಿರವಾರ ಬಸವ ವೃತ್ತದ ಹನುಮಾನ್ ಟ್ರೇಡರ್ಸ್‌ನಲ್ಲಿ ಕೃಷಿ ಇಲಾಖೆಯ ಜಾಗೃತಿ ದಳದ ಅಧಿಕಾರಿ ಶರಣಮ್ಮ, ಎಂ.ಡಿ ಸುಭಾನ್, ಕಡತಗಳನ್ನು ಪರಿಶೀಲನೆ ಮಾಡುತ್ತಿರುವುದು. 
ಜಿಲ್ಲೆ

ಅಧಿಕಾರಿಗಳಿಂದ ಕಡತಗಳ ಪರಿಶೀಲನೆ

ರುದ್ರಪ್ಪ ವಾಲಿ

ಸಿರವಾರ: ಪಟ್ಟಣದ ರಸಗೊಬ್ಬರ ಮತ್ತು ಕ್ರಿಮಿನಾಶಕ ಅಂಗಡಿಗಳ ಮೇಲೆ ಕೃಷಿ ಇಲಾಖೆ ಜಾಗೃತಿ ದಳದ ಅಧಿಕಾರಿಗಳಾದ ಶರಣಮ್ಮ, ಎಂ.ಡಿ. ಸುಭಾನ್ ಅವರು ಶುಕ್ರವಾರ ದಾಳಿ ನಡೆಸಿದರು.

ಬಸವ ವೃತ್ತದ ಹನುಮಾನ್ ಟ್ರೇಡರ್ಸ್, ವೆಂಕಟೇಶ್ವರ ರ್ಟಿಲೈರ್ಜರ್ಸ್ ಅಂಗಡಿಗಳ ಮೇಲೆ ದಾಳಿ ಮಾಡಿ ರಸಗೊಬ್ಬರ ಮತ್ತು ಕ್ರಿಮಿನಾಶಕಗಳ ಕಡತಗಳನ್ನು ಪರಿಶೀಲನೆ ಮಾಡಿದರು. ನಂತರ ಕೆಲ ಅನುಮಾನಾಸ್ಪದ ಬಯೋ ಕ್ರಿಮಿನಾಶಕಗಳನ್ನು ತಪಾಸಣೆ ಮಾಡುವುದಕ್ಕೆ ತೆಗೆದುಕೊಂಡು ಹೋದರು.

ಕಾಟಾಚಾರಕ್ಕೆ ದಾಳಿ: ಪಟ್ಟಣದಲ್ಲಿ 30ಕ್ಕೂ ಹೆಚ್ಚು ಅಂಗಡಿಗಳು ಇದ್ದು ಆದರೆ ತಂಡ ಕಾಟಾಚಾರಕ್ಕೆ ಎನ್ನುವಂತೆ ಎರಡು ಅಂಗಡಿಗಳ ಮೇಲೆ ದಾಳಿ ಮಾಡಿದೆ. ಅನೇಕ ಅಂಗಡಿಗಳ ಗೋಡೌನ್‌ಗಳಿದ್ದು, ಇವುಗಳನ್ನು ಪರಿಶೀಲನೆ ಮಾಡಿಲ್ಲ. ಪಟ್ಟಣದ ಅನೇಕ ಅಂಗಡಿಗಳಲ್ಲಿ ನಿಷೇಧಿತ ಬಯೋ ಕೆಮಿಕಲ್ಸ್ ಮಾರಾಟ ಮಾಡುತ್ತಾರೆ.

ಆದರೆ ಅದನ್ನು ಅಧಿಕಾರಿಗಳು ಕಣ್ಣಿದ್ದೂ ಕುರುಡಾಗಿ ನೋಡುತ್ತಿದ್ದಾರೆ. ಪಟ್ಟಣದ ಬಹುತೇಕ ಅಂಗಡಿಗಳಲ್ಲಿ ಸ್ಟಾಕ್ ಬೋರ್ಡ್ ಹಾಕುವುದಿಲ್ಲ. ರೈತರಿಗೆ ನೀಡುವ ಬಹುತೇಕ ಔಷಧಗಳಿಗೆ ಬಿಲ್ ಸಹ ನೀಡುವುದಿಲ್ಲ ಇದರ ಬಗ್ಗೆ ಮಾಹಿತಿ ಇದ್ದರು ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ.