ಅಳವಂಡಿ: ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಜಲಾನಯನದ ಮುರ್ಲಾಪುರ ಉಪ ಜಲಾನಯನ ವ್ಯಾಪ್ತಿ ಪ್ರದೇಶಕ್ಕೆ ವಿಶ್ವ ಬ್ಯಾಂಕ್‌ನ ಪರಿಶೀಲನೆ ತಂಡ ಸೋಮವಾರ ಭೇಟಿ ಮಾಹಿತಿ ಪಡೆದುಕೊಂಡಿತು.
ಇದನ್ನೂ ಓದಿ:ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ
ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆಯಡಿ ಮುರ್ಲಾಪುರ ಉಪ ಜಲಾನಯನ ವ್ಯಾಪ್ತಿಯ ಜಮೀನುಗಳಲ್ಲಿ ಕೈಗೊಂಡ ವಿವಿಧ ಮಣ್ಣು ಹಾಗೂ ನೀರಿನ ಸಂರಕ್ಷಣೆ ಕಾರ್ಯಕ್ರಮ, ಬದು ನಿರ್ಮಾಣ, ಕೃಷಿಹೊಂಡ, ಚೆಕ್‌ಡ್ಯಾಂ, ಒಳಗಟ್ಟೆ, ಗೋಕಟ್ಟೆ, ಅರಣ್ಯ, ತೋಟಗಾರಿಕೆ ಸಸಿಗಳನ್ನು ಪರಿಶೀಲನೆ ಮಾಡಿದರು. ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ರೈತರೊಂದಿಗೆ ಯೋಜನೆಯ ಕುರಿತು ಸಂವಾದ ನಡೆಸಿ ಮಾಹಿತಿ ಪಡೆದರು. ರೈತರು ಸದರಿ ಯೋಜನೆ ಬಗ್ಗೆ ಸಕಾರಾತ್ಮಕ ನಿಲುವು ವ್ಯಕ್ತಪಡಿಸಿದರು. ಪರಿಶೀಲನಾ ತಂಡದಿಂದ ಯೋಜನೆಗಳ ಕುರಿತು ಸಲಹೆ ನೀಡಲಾಯಿತು.
ವಿಶ್ವ ಬ್ಯಾಂಕ ತಂಡದ ಮುಖ್ಯಸ್ಥ ಎ.ವಿ.ಮೂರ್ತಿ, ಸದಸ್ಯರಾದ ಡಾ.ನಟರಾಜನ್, ಡಾ.ಕುಲುರಾಜನ್, ಡಾ.ರಾಜೇಂದ್ರ ಹೆಗ್ಗಡೆ, ಬೆಂಗಳೂರಿನ ಜಲಾನಯನ ಇಲಾಖೆಯ ಉಪ ಕೃಷಿ ನಿರ್ದೇಶಕಿ ಗೀತಾ ಹಳ್ಳಿ, ಕೊಪ್ಪಳ ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ಉಪ ಕೃಷಿ ನಿರ್ದೇಶಕ ಜಿ.ಎಮ್.ಸಿದ್ದೇಶ, ಸಹಾಯಕ ಕೃಷಿ ನಿರ್ದೇಶಕ ಜೀವನಸಾಬ ಕುಷ್ಟಗಿ, ಕೃಷಿ ಅಧಿಕಾರಿ ಪ್ರತಾಪಗೌಡ ಇತರರಿದ್ದರು.