ಸವದತ್ತಿ: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಮಾ.23ರಂದು ಬೃಹತ್ ಆರೋಗ್ಯ ಮೇಳ ಜರುಗುತ್ತಿರುವುದರಿಂದ ಶುಕ್ರವಾರ ಶಾಸಕ ವಿಶ್ವಾಸ ವೈದ್ಯ ಕ್ರೀಡಾಂಗಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಸುಮಾರು 300 ತಜ್ಞ ವೈದ್ಯರು ವಿವಿಧ ಕಾಯಿಲೆಗಳಿಗೆ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ನೀಡಲಿದ್ದಾರೆ. ಅಂದು ಊಟದ ವ್ಯವಸ್ಥೆ ಹಾಗೂ ವೇದಿಕೆ ಕಾರ್ಯಕ್ರಮ ಕೂಡ ಆಯೋಜಿಸಲಾಗಿದೆ. 10 ರಿಂದ 12 ಸಾವಿರ ಜನ ಆರೋಗ್ಯಮೇಳದಲ್ಲಿ ಭಾಗಿಯಾಗುವುದರಿಂದ ಎಲ್ಲ ರೀತಿಯ ಸಿದ್ಧತೆ ತ್ವರಿತಗತಿಯಲ್ಲಿ ಕೈಗೊಳ್ಳಬೇಕು. ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಸಂಚಾರ ದಟ್ಟಣೆಯಾಗದಂತೆ ಪೊಲೀಸರು ಸಮಾಲೋಚನೆ ನಡೆಸಿ ವಾಹನ ಸಂಚಾರದ ಮಾರ್ಗಗಳು, ವಾಹನಗಳ ಪಾರ್ಕಿಂಗ್ ಸ್ಥಳದ ಕುರಿತು ಖಚಿತಪಡಿಸಿಕೊಳ್ಳಬೇಕೆಂದರು.
ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ಪಿಐ ಧರ್ಮಾಕರ ಧರ್ಮಟ್ಟಿ, ಆರೋಗ್ಯಾಧಿಕಾರಿ ಶ್ರೀಪಾದ ಸಬನೀಸ್, ವಕೀಲ ಎ್.ವೈ. ಗಾಜಿ, ಮಂಜುನಾಥ ಪಾಚಂಗಿ, ಬಸವರಾಜ ಅರಮನಿ, ನೌಕರರ ಸಂಘದ ಅಧ್ಯಕ್ಷ ಅಶೋಕ ಮುರಗೋಡ, ಪ್ರವೀಣ ರಾಮಪ್ಪನವರ, ಶಿವಕುಮಾರ ರಾಠೋಡ ಇತರರಿದ್ದರು.