ರಾಷ್ಟ್ರೀಯ ಹೆದ್ದಾರಿ ಚೆರುವತ್ತೂರು- ಮುಟ್ಟಲಾಯಿಯಲ್ಲಿ ರಸ್ತೆಯಲ್ಲಿ ಕಾಣಿಸಿಕೊಂಡಿರುವ ಬಿರುಕಿನ ಬಗ್ಗೆ ಸಮಗ್ರ ಅಧ್ಯಯನ ನಡೆಸುವುದಕ್ಕಾಗಿ ಜಿಲ್ಲಾಧಿಕಾರಿ ನೇಮಿಸಿದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿತ್ತು. 
ಜಿಲ್ಲೆ

ಅಧಿಕಾರಿಗಳಿಂದ ರಾಷ್ಟ್ರೀಯ ಹೆದ್ದಾರಿ ಪರಿಶೀಲನೆ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಸೂಚನೆ ಅನ್ವಯ ಕಾರ್ಯ
ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಚೆರುವತ್ತೂರು- ಮುಟ್ಟಲಾಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾಗಿರುವ ಬಿರುಕಿನ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ನೇಮಿಸಿದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿತು.
ಕಾಂಞಂಗಾಡ್​ ಆರ್​ಡಿಒ ಪ್ರತಿನಿಧಿ ಹಿರಿಯ ಅಧೀಕ್ಷಕ ಇ.ಎಂ.ಬಿಜು, ಹೊಸದುರ್ಗ ತಹಸೀಲ್ದಾರ್​ ಪಿ.ಕೆ.ಪ್ರೇಮಾನಂದ, ಉಪ ತಹಸೀಲ್ದಾರ್​ ಪಿ.ವಿ.ತುಳಸಿರಾಜ್​, ಮಣ್ಣು ಸಂರಕ್ಷಣೆ ಮೇಲ್ವಿಚಾರಕ ಕೆ.ನಜೀಬುದ್ಧೀನ್​, ರಮ್ಲಾ.ಎನ್​, ಗಣಿ ಮತ್ತು ಭೂವಿಜ್ಞಾನ ಸಹಾಯಕ ಭೂವಿಜ್ಞಾನಿ ಅಜಿತ್​ ಎಲ್​., ಅಮೃತಾ.ಕೆ, ಚಂದೇರ ಪೊಲೀಸ್​ ಇನ್ಸ್​ಪೆಕ್ಟರ್​ ಶಿಜು ಎಂ.ವಿ, ಎಂವಿಐ ವಿಜಯನ್​ ಎಂ, ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್​ ಸುನೀಲ್​ಕುಮಾರ್​ ಎಸ್​. ಶಾಜಿ ತಯ್ಯಿಲ್​, ಪಿಲಿಕೋಡ್​ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಧುಸೂಧನನ್​.ವಿ, ಚೆರುವತ್ತೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಜಿ.ಎಸ್​. ಅರುಣಿಮಾ ಜತೆಗಿದ್ದರು.

ಸಮಸ್ಯೆಗಳ ಮನವರಿಕೆ

ಪಿಲಿಕೋಡ್​ ಗ್ರಾಮ ಪಂಚಾಯಿತಿ ಅಧ್ಯಕ್ಷ ಇ. ಕುಂಞಿರಾಮನ್​ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ಹರಿದಾಸ್​, ಜನಪ್ರತಿನಿಧಿಗಳು ಮತ್ತು ಗುತ್ತಿಗೆ ಕಂಪನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.