ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕುಮಾರಧಾರಾ ನದಿ ರಭಸವಾಗಿ ಹರಿಯುತ್ತಿದ್ದು, ನದಿಗಿಳಿದು ತೀರ್ಥಸ್ನಾನ ಮಾಡಲು ನಿರ್ಬಂಧ ವಿಧಿಸಲಾಗಿದೆ. ಆದುದರಿಂದ ಭಕ್ತರಿಗೆ ತೀರ್ಥಸ್ನಾನಕ್ಕೆ ಶವರ್ ವ್ಯವಸ್ಥೆ ಮಾಡಲು ಯೋಜನೆ ಸಿದ್ಧವಾಗಿದೆ.
ಜಿಲ್ಲಾಧಿಕಾರಿ ಆದೇಶದಂತೆ ಸದ್ಯ ತಾತ್ಕಾಲಿಕವಾಗಿ ಡ್ರಮ್‌ನಲ್ಲಿ ಕುಮಾರಧಾರಾ ತೀರ್ಥ ತುಂಬಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದೀಗ ಮಹಿಳೆಯರಿಗೆ-ಪುರುಷರಿಗೆ ಬೇರೆ ಶವರ್ ವ್ಯವಸ್ಥೆ ಮಾಡಲಾಗುತ್ತದೆ ದೇವಳ ಆಡಳಿತ ತಿಳಿಸಿದೆ.
ಸ್ಥಳ ಪರಿಶೀಲನೆ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಎ.ಇ.ಒ ಯೇಸುರಾಜ್, ಇಂಜಿನಿಯರ್ ಉದಯ್ ಕುಮಾರ್, ದೇವಳದ ಸುಧಾಕರ ಎಸ್.ಕೆ ಕುಮಾರಧಾರಾ ನದಿ ಸ್ನಾನಘಟ್ಟಕ್ಕೆ ಗುರುವಾರ ಆಗಮಿಸಿ ಪರಿಶೀಲನೆ ನಡೆಸಿ ಆಡಳಿತಾಧಿಕಾರಿಗಳಿಗೆ ವರದಿ ಸಲ್ಲಿಸಿದರು.