ಜಿಲ್ಲೆ

ಇಂದಿರಾಗಾಜಿನ ಮನೆ ಕಾಮಗಾರಿ ಪರಿಶೀಲನೆ

ಮರಿದೇವ ಹೂಗಾರ

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಇಂದಿರಾ ಗಾಜಿನ ಮನೆಯ ಮರು ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತರ ತಂಡ ಮಂಗಳವಾರ ಭೇಟಿ ನೀಡಿ, ಪರಿಶೀಲಿಸಿತು.

26.50 ಕೋಟಿ ರೂ. ಅನುದಾನದಲ್ಲಿ ಕಾಮಗಾರಿ ನಡೆಸಲಾಗಿದೆ. ಆದರೆ, ಯಾವುದೇ ಕಾಮಗಾರಿ ಇಲ್ಲಿ ಆಗಿಲ್ಲ. ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಆದ್ದರಿಂದ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ವಿಶೇಷ ತಜ್ಞರ ತಂಡ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಲು ಮನವಿ ಮಾಡಲಾಗಿತ್ತು. ಅದರಂತೆ ಅಧಿಕಾರಿಗಳು ಸ್ಪಂದಿಸಿ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಪಕ್ಷದ ಬಸವರಾಜ ತೆರದಾಳ ತಿಳಿಸಿದರು.

ಪುಟಾಣಿ ರೈಲ್ವೆ, ಫಜಲ್ ರ್ಪಾಂಗ್, ಒಪನ್ ಜಿಮ್ ಕಾಮಗಾರಿ ಕಳಪೆಯಾಗಿದೆ. ಸುಣ್ಣ- ಬಣ್ಣ ಲೇಪನ ಹಚ್ಚಿ, ಈ ಕಾಮಗಾರಿ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಲೋಕಾಯುಕ್ತ ಇನ್​ಸ್ಪೆಕ್ಟರ್ ಕರಿಯಪ್ಪ ಬನ್ನಿ, ದೂರುದಾರ ರೇವಣಸಿದ್ದಪ್ಪ ಹುಬ್ಬಳ್ಳಿ, ಪಾಲಿಕೆ ಮಾಜಿ ಸದಸ್ಯ ಲಕ್ಷ್ಮಣ ಗಂಡಗಾಳೇಕರ, ಸ್ಮಾರ್ಟ್ ಸಿಟಿ ಕಂಪನಿಯ ಡಿಜಿಎಂ ಬಸವರಾಜ, ಅಜೀಜ್​ದೇಸಾಯಿ, ಇತರರು ಇದ್ದರು.