ಮದ್ದೂರಿನ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ನಡೆಯುತ್ತಿರುವ ಕಾಮಗಾರಿಯನ್ನು ಶಾಸಕ ಕೆ.ಎಂ.ಉದಯ್ ಪರಿಶೀಲಿಸಿದರು. ಮಹೇಶ್, ಯತೀಶ್, ಶಿವು ಇದ್ದರು. 
ಜಿಲ್ಲೆ

ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

ಮದ್ದೂರು: ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಆಂಜನೇಯ ದೇವಾಲಯ ಮತ್ತು ತಾಲೂಕಿನ ವೈದ್ಯನಾಥಪುರ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ವೈದ್ಯನಾಥೇಶ್ವರ ದೇವಾಲಯಗಳ ಮುಂಭಾಗ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ಕೆ.ಎಂ.ಉದಯ್ ಶುಕ್ರವಾರ ಪರಿಶೀಲಿಸಿದರು.

ಹೊಳೆ ಆಂಜನೇಯಸ್ವಾಮಿ ದೇಗುಲದ ಮುಂದೆ ಶಿಂಷಾ ನದಿಗೆ ಅಡ್ಡಲಾಗಿ ತಡೆಗೋಡೆ ಸೇರಿದಂತೆ 2 ದೇವಾಲಯಗಳ ಮುಂದೆ ವಿವಿಧ ಹಂತಗಳ ಕಾಮಗಾರಿಗಳು ಪ್ರಗತಿ ಹಂತದಲ್ಲಿದ್ದು, ಕಾಮಗಾರಿಗಳನ್ನು ವೀಕ್ಷಿಸಿ, ಯೋಜನೆಯ ಪ್ರಗತಿ ಹಾಗೂ ಗುಣಮಟ್ಟದ ಬಗ್ಗೆ ಅಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಬಳಿಕ ಮಾತನಾಡಿ, ಶಿಂಷಾ ನದಿ ನದಿ ತಡದಲ್ಲಿ ತಡೆಗೋಡೆ ನಿರ್ಮಾಣವು ನದಿ ಪ್ರವಾಹದ ಸಂದರ್ಭದಲ್ಲಿ ಭೂ ಕುಸಿತ ತಡೆಯಲು ಸಹಾಯಕವಾಗುತ್ತದೆ. ದೇವಾಲಯದ ಮುಂಭಾಗದಲ್ಲಿ ಹಂತಗಳ ನಿರ್ಮಾಣವು ಭಕ್ತಾದಿಗಳಿಗೆ ಸುಲಭ ಪ್ರವೇಶ ಮತ್ತು ಸೌಕರ್ಯ ಒದಗಿಸಲಿದೆ. ಕಾಮಗಾರಿಯ ಗುಣಮಟ್ಟ ಮತ್ತು ವೇಗವನ್ನು ಪರಿಶೀಲಿಸುವ ಮೂಲಕ, ಅಭಿವೃದ್ಧಿ ಕಾರ್ಯಗಳು ನಿರ್ದಿಷ್ಟ ಸಮಯಕ್ಕೆ ಪೂರ್ಣಗೊಳ್ಳುವಂತೆ ಅಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗಿದೆ ಎಂದರು.

ಈ ಕಾಮಗಾರಿಗಳು ಶೀಘ್ರವಾಗಿ ಪೂರ್ಣಗೊಳ್ಳುವ ಮೂಲಕ, ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸ ಹಾಗೂ ಭಕ್ತರ ಅನುಕೂಲತೆಯ ದೃಷ್ಟಿಯಿಂದ ಮಹತ್ವದ ಬದಲಾವಣೆಯು ನಿರೀಕ್ಷಿಸಲಾಗುತ್ತಿದೆ. ಎಂದರು.

ಮಾಜಿ ಸೈನಿಕ ಸಿಪಾಯಿ ಶ್ರೀನಿವಾಸ್, ಮುಖಂಡರಾದ ಯತೀಶ್, ಶಿವರಾಜು, ಆರ್.ಸಿ.ಮಹೇಶ್, ಶಿವು ಇದ್ದರು.