ಚಿಕ್ಕಮಗಳೂರು: ರೈತ ಉತ್ಪಾದಕರ ಸಂಸ್ಥೆಗಳಿಗೆ ಬಾಕಿಯಿರುವ ಹಣವನ್ನು ರಾಜ್ಯ ಸರ್ಕಾರ ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಶಂಭೈನೂರು ಆನಂದಪ್ಪ, ನಬಾರ್ಡ್ ಪ್ರಾಯೋಜಿತ ರಾಷ್ಟಿçÃಯ ಕೃಷಿ ವಿಕಾಸ ಯೋಜನೆ ಮತ್ತು ಪ್ರಧಾನಮಂತ್ರಿಗಳು ೧೦ ಸಾವಿರ ರೈತ ಉತ್ಪಾದಕರ ಯೋಜನೆಯಡಿಯಲ್ಲಿ ಒಟ್ಟು ೩ ಯೋಜನೆಗಳಿಂದ ೭೧೦ ರೈತ ಉತ್ಪಾದಕರ ಸಂಸ್ಥೆಗಳು ಪ್ರಾರಂಭವಾಗಿವೆ ಎಂದರು.
ರಾಜ್ಯದಲ್ಲಿ ೪೯೦ ರೈತ ಉತ್ಪಾದಕರ ಸಂಸ್ಥೆಗಳಿಗೆ ೧೫೦ ಕೋಟಿ ರೂ. ನೀಡಬೇಕಿದ್ದು, ಇದರಲ್ಲಿ ಶೇ.೧೨ರಷ್ಟು ಮಾತ್ರ ಅನುದಾನವನ್ನು ರಾಜ್ಯಸರ್ಕಾರ ಬಿಡುಗಡೆ ಮಾಡಿದೆ. ಇನ್ನುಳಿದ ಶೇ.೮೨ರಷ್ಟು ಅನುದಾನವನ್ನು ಬಿಡುಗಡೆಗೊಳಿಸದಿರುವ ಕಾರಣ ರೈತ ಉತ್ಪಾದಕ ಸಂಸ್ಥೆಗಳ ಅಭಿವೃದ್ಧಿ ಕುಂಠಿತವಾಗಿದೆ ಎಂದು ದೂರಿದರು.
ಪ್ರಸ್ತುತ ಶೇ. ೧೨ರಷ್ಟು ಅನುದಾನ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾಗಿತ್ತು. ಹಾಗಾಗಿ ರಾಜ್ಯಸರ್ಕಾರ ಉಳಿದಿರುವ ಶೇ.೮೨ ರಷ್ಟು ಬಾಕಿ ಮೊತ್ತವನ್ನು ತ್ವರಿತವಾಗಿ ಬಿಡುಗಡೆಗೊಳಿಸದಿದ್ದಲ್ಲಿ ೧೦ ಲಕ್ಷ ರೈತರಿಗೆ ಮತ್ತು ೧೨ ಸಾವಿರ ರೈತ ಉತ್ಪಾದಕರ ಸಂಸ್ಥೆಗಳ ನಿರ್ದೇಶಕರಿಗೆ ತೀವ್ರ ಸಮಸ್ಯೆ ಎದುರಾಗಲಿದೆ ಎಂದು ಹೇಳಿದರು.
ಹೀಗಾಗಿ ಕೂಡಲೇ ಬಾಕಿಯಿರುವ ಅನುದಾನವನ್ನು ರೈತ ಉತ್ಪಾದಕರ ಸಂಸ್ಥೆಗಳಿಗೆ ಬಿಡುಗಡೆಗೊಳಿಸಿ ಅಭಿವೃದ್ಧಿಗೆ ಸಹಕರಿಸಬೇಕು. ಒಂದು ವೇಳೆ ವಿಳಂಭ ಧೋರಣೆ ಅನುಸರಿಸಿದರೆ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ನೀತಿಯ ವಿರುದ್ಧ ರಾಜ್ಯಾದ್ಯಂತ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಮಾರ್, ದಿನೇಶ್ ಪಾದಮನೆ, ಉಪಾಧ್ಯಕ್ಷ ನಾಗರಾಜ್, ನಗರ ಮಂಡಲ ಅಧ್ಯಕ್ಷರಾದ ನಿಶಾಂತ್, ಸತೀಶ್ ಕುಪ್ಪೆನಹಳ್ಳಿ ಮತ್ತಿತರರಿದ್ದರು.