ಲಕ್ಷ್ಮೇಶ್ವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅವಶ್ಯವಿರುವ ವೈದ್ಯರ ನೇಮಕ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದವರ ವೈದ್ಯಾಧಿಕಾರಿ ಡಾ. ಶ್ರೀಕಾಂತ ಕಾಟೇವಾಲ ಮೂಲಕ ಜಿಲ್ಲಾ ಆರೋಗ್ಯಾಧಿಕಾರಿಗೆ ಮನವಿ ಸಲ್ಲಿಸಿದರು 
ಜಿಲ್ಲೆ

ಆರೋಗ್ಯ ಕೇಂದ್ರಕ್ಕೆ ವೈದ್ಯರ ನೇಮಕಕ್ಕೆ ಒತ್ತಾಯ

ಲಕ್ಷ್ಮೇಶ್ವರ: ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ವೈದ್ಯರನ್ನು ನೇಮಕ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದವರು ವೈದ್ಯಾಧಿಕಾರಿ ಡಾ. ಶ್ರೀಕಾಂತ ಕಾಟೇವಾಲ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಸ್ವಾಭಿಮಾನಿ ಬಣದ ತಾಲೂಕಾಧ್ಯಕ್ಷ ರವಿ ಲಿಂಗಶೆಟ್ಟಿ ಮತ್ತು ಮುಖಂಡರು, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಲವು ವರ್ಷಗಳಿಂದ ವೈದ್ಯರನ್ನು ನೇಮಕ ಮಾಡಿಲ್ಲ.ರೋಗಿಗಳಿಗೆ ಚಿಕಿತ್ಸೆ ಇಲ್ಲದಂತಾಗಿದೆ. ಹೆರಿಗೆ, ಅರಿವಳಿಕೆ, ಚಿಕ್ಕಮಕ್ಕಳ ತಜ್ಞರು ಸೇರಿ ವಿವಿಧ ವೈದ್ಯರನ್ನು ನೇಮಕ ಮಾಡಲು ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ರೀಕಾಂತ ಕಾಟೇವಾಲೆ ಮನವಿ ಸ್ವೀಕರಿಸಿದರು. ಕರವೇ ಸ್ವಾಭಿಮಾನಿ ಬಣದ ಬೀರಪ್ಪ ಪೂಜಾರ, ಶಿವಣ್ಣ ಗಿಡಿಬಿಡಿ, ಎಂ.ಎಂ. ಖಂಡ್ರೋಜಿ, ರಾಜು ಹಾದಿಮನಿ, ಮಂಜುನಾಥ ಚಂದರಗಿ, ಜಮಾಲ್‌ಸಾಬ್ ನಧಾಪ್, ಬಸವರಾಜ ದೇಸಾಯಿ, ಇತರರಿದ್ದರು.