ಚಿಕ್ಕಮಗಳೂರು: ಪಕ್ಷ ಸಂಘಟನೆಯಲ್ಲಿ ಮೂರುವರೆ ದಶಕಗಳ ಕಾಲ ದುಡಿದಿರುವ ದಲಿತ ಸಮುದಾಯದ ಮುಖಂಡ ಹಿರೇಮಗಳೂರು ರಾಮಚಂದ್ರ ಅವರಿಗೆ ಈ ಬಾರಿ ಸಿಡಿಎ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಬಸವರಾಜ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಐಡಿಎಸ್‌ಜಿ ಕಾಲೇಜು ಹೆಲಿಪ್ಯಾಡ್‌ಗೆ ಆಗಮಿಸಿದ ವೇಳೆಯಲ್ಲಿ ಎಸ್ಸಿ ಘಟಕದ ಜಿಲ್ಲಾ ಉಪಾಧ್ಯಕ್ಷ ಶಾಂತಕುಮಾರ್ ಹಾಗೂ ಕಾರ್ಯಕರ್ತರು ಸಚಿವರಿಗೆ ಮನವಿ ಸಲ್ಲಿಸಿ, ದಶಕಗಳ ಕಾಲ ಪಕ್ಷನಿಷ್ಟೆ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಹಿರೇಮಗಳೂರು ರಾಮಚಂದ್ರ ಸಿಡಿಎ ಅಧ್ಯಕ್ಷ ಸ್ಥಾನಕ್ಕೆ ಅರ್ಹ ವ್ಯಕ್ತಿ ಎಂದು ತಿಳಿಸಿದರು.
ನಗರಾಭಿವೃದ್ದಿ ಅಧ್ಯಕ್ಷ ಸ್ಥಾನವನ್ನು ಈಗಾಗಲೇ ದಲಿತ ಸಮುದಾಯ ಹೊರತುಪಡಿಸಿ ಇತರೆ ಸಮಾಜದ ಎಲ್ಲ ಮುಖಂಡರಿಗೆ ಲಭಿಸಿದೆ. ಹೀಗಾಗಿ ಈ ಬಾರಿ ಅಧ್ಯಕ್ಷ ಸ್ಥಾನವನ್ನು ದಲಿತ ಸಮುದಾಯ ಮುಖಂಡರಿಗೆ ಒದಗಿಸಿಕೊಟ್ಟಲ್ಲಿ ಜನಾಂಗವು ಇನ್ನಷ್ಟು ಬೆಳವಣಿಗೆ ಹೊಂದಲಿದೆ ಎಂದು ಮನವಿಯಲ್ಲಿ ಹೇಳಿದರು.
ಚಿಕ್ಕಮಗಳೂರು ಕ್ಷೇತ್ರ ಸೇರಿದಂತೆ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರ ಗೆಲುವಿಗೆ ಪ್ರಮುಖ ಕಾರಣರಾಗಿರುವ ದಲಿತ ಸಮುದಾಯಕ್ಕೆ ಇಂದಿಗೂ ಸಾಮಾಜಿಕ ನ್ಯಾಯದಡಿ ಸ್ಥಾನಮಾನ ದೊರಕಿಲ್ಲ. ಪಕ್ಷ ಸಂಘಟನೆಗೆ ಗ್ರಾಮಗಳಿಗೆ ಭೇಟಿ ನೀಡಿದ ಕ್ಷಣದಲ್ಲಿ ಗ್ರಾಮಸ್ಥರು ಪ್ರಶ್ನಿಸುವಂತಾಗಿದೆ. ಹೀಗಾಗಿ ದಲಿತ ಸಮುದಾಯ ರಾಮಚಂದ್ರ ಅವರಿಗೆ ಸಿಡಿಎ ಸ್ಥಾನ ಕಲ್ಪಿಸಿ ಜನಾಂಗದ ಬೆಳವಣಿಗೆಗೆ ಸಹಕರಿಸಬೇಕು ಎಂದರು.
ಮನವಿ ಮೇರೆಗೆ ಪ್ರತಿಕ್ರಿಯಿಸಿದ ಸಚಿವ ಬೈರತಿ ಸುರೇಶ್, ಪಕ್ಷದಲ್ಲಿ ನಿಷ್ಟಾವಂತ ಕಾರ್ಯಕರ್ತರ ಶ್ರಮಕ್ಕೆ ಖಂಡಿತ ಬೆಲೆಯಿದೆ. ನ್ಯಾಯಸಮ್ಮತ ತೀರ್ಮಾನಕ್ಕೆ ಪಕ್ಷವು ಬದ್ಧವಾಗಿದ್ದು, ಸದ್ಯದಲ್ಲೇ ಮುಖಂಡರೊAದಿಗೆ ಚರ್ಚಿಸಿ ಕೆಲವೇ ದಿನಗಳಲ್ಲಿ ದಲಿತ ಸಮುದಾಯಕ್ಕೆ ಸ್ಥಾನಮಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ, ನಗರಸಭೆ ಮಾಜಿ ಸದಸ್ಯ ಎಚ್.ಎಸ್.ಜಗದೀಶ್, ಮುಖಂಡರಾದ ಸಂತೋಷ್ ಲಕ್ಯಾ, ಶಿವಣ್ಣ, ಶಿವಾಜಿ, ಗುಂಗರಹಳ್ಳಿ ಸೋಮಣ್ಣ, ಉz್ದೆÃಬೋರನಹಳ್ಳಿ ರಮೇಶ್, ಹಿರೇಮಗಳೂರು ಗ್ರಾಮಸ್ಥರಾದ ಎಚ್.ಸಿ.ಗಂಗಾಧರ್, ಎಚ್.ಕೆ.ಜಯಣ್ಣ, ನಿಡಘಟ್ಟ ಅರುಣ್, ರಾಜಶೇಖರ್ ಮತ್ತಿತರರಿದ್ದರು.