ಜಿಲ್ಲೆ

ಡಿಲಿಮಿಟೇಶನ್ ಆಯೋಗದಿಂದ ವಿಚಾರಣೆ

Avinash R

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಯಲ್ಲಿನ ವಾರ್ಡ್‌ಗಳ ಕರಡು ವಿಂಗಡಣೆಗೆ ಸಂಬಂಧಿಸಿದಂತೆ ಲಭ್ಯವಿರುವ ಕುಂದುಕೊರತೆಗಳ ಕುರಿತು ರಾಜ್ಯ ಡಿಲಿಮಿಟೇಶನ್ ಆಯೋಗದ ವಿಚಾರಣೆ ಕಾಸರಗೋಡು ನಗರ ಸಭಾಂಗಣದಲ್ಲಿ ಜರುಗಿತು.

ಆಯೋಗದ ಅಧ್ಯಕ್ಷ ಎ.ಶಹಜಹಾನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಚುನಾವಣಾ ಉಸ್ತುವಾರಿ ಎಡಿಎಂ ಪಿ.ಅಖಿಲ್ ಉಪಸ್ಥಿತರಿದ್ದರು. ನಿಗದಿತ ಕಾಲಾವಧಿಗೆ ಮೊದಲು ವಾರ್ಡ್‌ಗಳ ಯಾ ವಿಧಾನಸಭಾ ಕ್ಷೇತ್ರಗಳ ಕರಡು ವಿಂಗಡಣೆ ಪ್ರಸ್ತಾವನೆಗಳ ಕುರಿತು ತಮ್ಮ ಆಕ್ಷೇಪಣೆಗಳು ಮತ್ತು ಅಭಿಪ್ರಾಯಗಳನ್ನು ಸಲ್ಲಿಸಿದವರು ವಿಚಾರಣೆಗೆ ಹಾಜರಾಗಿದ್ದರು.

ಕಾಸರಗೋಡು ಮತ್ತು ಕಾರಡ್ಕ ಬ್ಲಾಕ್, ಗ್ರಾಮ ಪಂಚಾಯಿತಿ ಮತ್ತು ಕಾಸರಗೋಡು ನಗರಸಭೆಯ ಆಯ್ದ 311 ಅರ್ಜಿಗಳೊಂದಿಗೆ ಅರ್ಜಿದಾರರು ತಮ್ಮ ಆಕ್ಷೇಪಣೆ ಮತ್ತು ಅಭಿಪ್ರಾಯ ಸಲ್ಲಿಸಿದರು.