ಜಿಲ್ಲೆ

ಬೋಧನೆಯಲ್ಲಿ ಇರಲಿ ವಿನೂತನ ಶೈಲಿ

ರವಿ ಎಸ್. ಬಳೂಟಗಿ

ಡಂಬಳ: ಮಕ್ಕಳ ಆಲೋಚನಾ ಶೈಲಿ ಬದಲಾಗಿದೆ. ಶಿಕ್ಷಕರು ತಮ್ಮ ಬೋಧನೆಯಲ್ಲಿ ನವೀನ, ವಿನೂತನ ಬೋಧನಾ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು ಎಂದು ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ ಹೇಳಿದರು.

ಸಮೀಪದ ಮೇವುಂಡಿ ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೋಧಿಸುವಾಗ ಪರೀಕ್ಷೆಯ ದೃಷ್ಟಿ ಗಮನದಲ್ಲಿಟ್ಟುಕೊಳ್ಳಬೇಕು. ಓದಿಗಾಗಿ ಕಿರುಮಾರ್ಗ ಅನುಸರಿಸದೆ ಸಮಗ್ರ ಅಧ್ಯಯನ ಮಾಡುವಂತೆ ಬೋಧಿಸಬೇಕು. ಮಗುವಿನ ಮಾನಸಿಕ ಸಾಮರ್ಥ್ಯ ಅರಿತು ಕಾಲಕ್ಕೆ ಅನುಗುಣವಾಗಿ ಪರಿಣಾಮಕಾರಿಯಾಗಿ ಶಿಕ್ಷಕರು ಬೋಧಿಸಬೇಕು ಎಂದರು.

ಬಿಆರ್‌ಪಿ ಹನುಮರಡ್ಡಿ ಇಟಗಿ, ನಿವೃತ್ತ ಶಿಕ್ಷಕ ಪಿ.ಜಿ. ಹಿರೇಮಠ, ಅಜ್ಮೀರ ಹಾರೋಗೇರಿ ಮಾತನಾಡಿ, ಶಿಕ್ಷಕರು ತರಗತಿಗೆ ಹೋಗುವ ಮುನ್ನ ಬೋಧಿಸುವ ಪಾಠದ ಬಗ್ಗೆ ಸಂಪೂರ್ಣ ತಯಾರಿ ಮಾಡಿಕೊಂಡಿರಬೇಕು. ಸಮಾಜದಲ್ಲಿ ಶಿಕ್ಷಕರನ್ನು ಗೌರವದಿಂದ ಕಾಣುವುದು ಕೇವಲ ದಿನಾಚರಣೆಗೆ ಮಾತ್ರ ಸೀಮಿತವಾಗದೆ ನಿತ್ಯವೂ ಗೌರವಿಸುವಂತೆ ಆಗಬೇಕು ಎಂದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಬ್ಯಾಳಿ, ಸಿಆರ್‌ಪಿ ಎನ್.ಎಂ. ಕುಕನೂರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಶಿವಕುಮಾರ ಸಜ್ಜನರ, ಶಿಕ್ಷಕ ರವಿ ದೇವರೆಡ್ಡಿ, ಶಂಭುಲಿಂಗ ಪೂಜಾರ, ರವಿ ನಾಯಕ, ಎಂ.ಎಚ್. ಸವದತ್ತಿ, ಅಜ್ಮೀರ ಹಾರೋಗೇರಿ, ನವೀನ ಸಾವಂತ, ಶಿಕ್ಷಕಿ ಗಂಗಮ್ಮ ಹುನಕುಂಟಿ, ಎಸ್.ಎಸ್. ಬೆಟಗೇರಿ, ವನಜಾಕ್ಷಿ ಹಿರೇಮಠ, ಸುಧಾ ಭಜಂತ್ರಿ, ಲಕ್ಷ್ಮವ್ವ ರೋಣದ, ಉಮಾಶ್ರೀ ಗುಗ್ಗರಿ, ನಾಗಯ್ಯ ಓದಿಸೋಮಠ ಇತರರಿದ್ದರು. ಶಿಕ್ಷಕಿ ಕವಿತಾ ಪಾರಪ್ಪನವರ ನಿರೂಪಿಸಿದರು. ನಾಗರತ್ನಾ ಪಾಟೀಲ ಸ್ವಾಗತಿಸಿದರು. ಲತಾ ಬಂಡಿವಡ್ಡರ ವಂದಿಸಿದರು.