ಜಿಲ್ಲೆ

ಕುಮಟಾದ ನಾಗರಾಜ ನಾಯ್ಕರಿಗೆ ಇನ್ನೋವೇಟಿವ್ ರೈತ ಪ್ರಶಸ್ತಿ

Uttara Kannada - Subash Hegde
ಕಾರವಾರ: ಭಾರತೀಯ ಕೃಷಿ ಸಂಶೋದನ ಸಂಸ್ಥೆಯು, (IARI) ನವದೆಹಲಿ ಇವರು ನೀಡಲ್ಪಡುವ  2025 ನೇ ಸಾಲಿನ ಇನ್ನೋವೇಟಿವ್ ರೈತ ಪ್ರಶಸ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಾಗಾಲ ಗ್ರಾಮದ ನಾಗರಾಜ ನಾಯ್ಕ ಇವರಿಗೆ ದೆಹಲಿಯ ಪೂಸಾ ಕೃಷಿ ವಿಜ್ಞಾನ ಮೇಳದಲ್ಲಿ ಸೋಮವಾರ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ನಾಗರಾಜ ನಾಯ್ಕ ಇವರು ತಮ್ಮ ಜಮೀನು ನಲ್ಲಿ ಸಮಾರು 600 ಕ್ಕೂ ಹೆಚ್ಚು ಸಾoಪ್ರದಾಯಿಕ ಹಳೆಯ ಭತ್ತದ ತಳಿಗಳನ್ನು ಬೆಳೆಯತ್ತಿದ್ದು, ಇಂತಹ ಭತ್ತದ ತಳಿಗಳನ್ನು ಸಂರಕ್ಷಣಾ ಮಾಡುತಿರುವುದು ಶ್ಲಾಘನೀಯವಾಗಿದೆ . ಮುಖ್ಯವಾಗಿ ಘಜನಿ ಭೂಮಿಯಲ್ಲಿ ಬೆಳೆಯುವ ಕರಿ ಕಗ್ಗ ಹಾಗೂ ಬಿಳಿ ಕಗ್ಗ ತಳಿಗಳನ್ನು ಉಳಿಸುವ ಕಾರ್ಯ ಮಾಡುತ್ತಿದ್ದಾರೆ. ಇದಲ್ಲದೇ ಇವರು ಹಳೆಯ ಸಂಪ್ರಾದಾಯಿಕ ತಳಿಗಳ ಸಂರಕ್ಷಣೆಗೆ ಬಗ್ಗೆ ರೈತರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿರುವ ಇವರಿಗೆ ಕೃಷಿ ವಿಜ್ಞಾನ ಕೇಂದ್ರ ಶಿರಸಿ ಹಾಗು ಕೃಷಿ ಇಲಾಖೆ  ಉತ್ತರ ಕನ್ನಡ ಜಿಲ್ಲೆವತಿಯಿಂದ ಅಭಿನಂದಿಸಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.