ಜಮಖಂಡಿ ತಾಲೂಕಿನ ಸಿದ್ದಾಪುರ ಗ್ರಾಮದ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಮುಂಭಾಗದಲ್ಲಿ ಇನ್ನರ್‌ವೀಲ್ ಲಾಂಛನ ಸ್ಥಂಭವನ್ನು ಅನಾವರಣಗೊಳಿಸಿದರು. ಆಶಾದೇವಿ ಗುಡಗುಂಟಿ, ವೈಶಾಲಿ ಲೋಖಂಡೆ, ಡಾ.ಅಶ್ವಿನಿ ಪೂಜಾರಿ ಇದ್ದರು. 
ಜಿಲ್ಲೆ

ಇನ್ನರ್‌ವೀಲ್ ಅತಿ ದೊಡ್ಡ ಮಹಿಳಾ ಸಂಸ್ಥೆ

ದತ್ತಾತ್ರೇಯ ಪಿ ಕುಲಕರ್ಣಿ

ಜಮಖಂಡಿ: ಇನ್ನರ್‌ವೀಲ್ ಸಂಸ್ಥೆ ಪ್ರಪಂಚದಲ್ಲೇ ಅತಿ ದೊಡ್ಡದಾದ ಮಹಿಳಾ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ ಎಂದು ಇನ್ನರ್‌ವೀಲ್ ಸಂಸ್ಥೆ ತಾಲೂಕು ಅಧ್ಯಕ್ಷೆ ಆಶಾದೇವಿ ಗುಡಗುಂಟಿ ಹೇಳಿದರು.

ತಾಲೂಕಿನ ಸಿದ್ದಾಪುರ ಗ್ರಾಮದ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಮುಂಭಾಗದಲ್ಲಿ ಇನ್ನರ್‌ವೀಲ್ ಸಂಸ್ಥೆ ಶತಮಾನೋತ್ಸವ ಅಂಗವಾಗಿ ಇನ್ನರ್‌ವೀಲ್ ಲಾಂಛನ ಸ್ಥಂಭ ಅನಾವರಣಗೊಳಿಸಿ ಅವರು ಮಾತನಾಡಿದರು.

1924 ರಲ್ಲಿ ಮಾರ್ಗರೇಟ್ ಗೋಲ್ಡಿಂಗ್ ಇವರಿಂದ ಪ್ರಾರಂಭವಾದ ಇನ್ನರ್‌ವೀಲ್ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಾಜ ಸೇವೆ ಮಾಡುತ್ತ ಬಂದಿದೆ ಎಂದರು.

ಡಿಸ್ಟಿಕ್ ಚೇರ್ಮನ್ ವೈಶಾಲಿ ಲೋಖಂಡೆ ಮಾತನಾಡಿ, ಆಶಾದೇವಿ ಗುಡಗುಂಟಿಯವರು ಸಾಕ್ಷರತೆ, ಮಹಿಳಾ ಸ್ವಾವಲಂಬನೆ, ರೋಗಗಳ ವಿರುದ್ಧ ಹೋರಾಡುವುದು, ಪರಿಸರ ಸಂರಕ್ಷಣೆ, ಹೀಗೆ ಹತ್ತು ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಎಲ್ಲ ಸದಸ್ಯರೊಂದಿಗೆ ಮಾಡುತ್ತ ಬಂದಿರುವುದು ತುಂಬ ಶ್ಲಾಘನೀಯ ಎಂದರು. ಕಾರ್ಯದರ್ಶಿ ಡಾ. ಅಶ್ವಿನಿ ಪೂಜಾರಿ, ಸಂಸ್ಥೆ ಸದಸ್ಯರು ಇದ್ದರು.