ಗದಗ: ಇನ್ನರ್ ವೀಲ್ ಕ್ಲಬ್ ಆಫ್ ಗದಗ್ ಮಿಡ ಟೌನ್ ಸದಸ್ಯರ ನೂತನ ಪದಗ್ರಹಣ ಸಮಾರಂಭವು ಜುಲೈ 1 ರಂದು ಗದುಗಿನ ಕುಮಾರೇಶ್ವರ ಪಾಠಶಾಲೆಯಲ್ಲಿ ನಡೆಯಿತು. 2024-25 ರ ನೂತನ ಅಧ್ಯಕ್ಷರಾಗಿ ಪ್ರೀತಿ ಶಿವಪ್ಪನಮಠ ಅವರಿಗೆ ಡಿಸ್ಟಿಕ್ ಎಡಿಟರ್ ಆದ ಶಾಲಿನಿ ಚೌಗುಲೆಅವರು ಕಾಲರ್ ಧಾರಣೆ ಮಾಡಿದರು, ಕಾರ್ಯದರ್ಶಿ ಆಗಿ ಶ್ರೀಮತಿ ರಾಣಿ ಚಂದಾವರಿ, ಖಜಾಂಚಿ ಆಗಿ ಶ್ರೀಮತಿ ಮಂಗಲಾ ನಲ್ವಾತ್ವಾಡ್ ಮಠ, ಐ ಎಸ್ ಓ ಆಗಿ ಶ್ರೀಮತಿ ಗೀತಾ ಭಿಕ್ಷಾವತಿ ಮಠ, ಎಡಿಟರ್ ಆಗಿ ಮಾಜಿ ಅಧ್ಯಕ್ಷ ಆರತಿ ಜೀರಂಕಳಿ, ಸಿ. ಎಲ್. ಸಿ. ಆಗಿ ಮಾಜಿ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಕವಲೂರ, ಅವರು ಪದಗ್ರಹಣ ಮಾಡಿ ಅಧಿಕಾರ ವಹಿಸಿಕೊಂಡರು. ನೂತನ ಅಧ್ಯಕ್ಷರಾದ ಪ್ರೀತಿ ಶಿವಪ್ಪನಮಠ ಅವರು ತಮ್ಮ ಸ್ವೀಕೃತಿ ಭಾಷಣದಲ್ಲಿ ಅನಾಥ ಮಕ್ಕಳ ಕಡೆ ಗಮನ, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಜಾಗೃತ ಗೊಳ್ಳಿಸುವ ಕಾರ್ಯದಲ್ಲಿ ವಿಶೇಷ ಗಮನ ಕೊಡುವರು ಎಂದು ಹೇಳಿದ್ದಾರೆ.
ಮೊದಲನೆಯದಾಗಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಇನ್ನರ್ ವೀಲ್ ಗೀತೆಯನ್ನು ಶ್ರೀಮತಿ ಪ್ರೀತಿ ಶಿವಪ್ಪನ ಮಠ ಹಾಗೂ ಶ್ರೀಮತಿ ರಾಣಿ ಚಂದಾವರಿ ಹಾಗೂ ಪ್ರಾರ್ಥನಾ ಗೀತೆಯನ್ನು ಶ್ರೀಮತಿ ಅಭಿನೇತ್ರಿ ರೇವಣಕರ ಅವರು ಹಾಡಿದರು. ಅಧ್ಯಕ್ಷ ಶ್ರೀಮತಿ ವಿಜಯಲಕ್ಷ್ಮಿ ಬಿರಾದಾರ್ ಅವರು ಎಲ್ಲರನ್ನು ಸ್ವಾಗತಿಸಿದರು,ಇನ್ಸ್ಟಾಲಿಂಗ್ ಆಫೀಸರ್ ಶ್ರೀಮತಿ ಶಾಲಿನಿ ಚೌಗುಲೆ ಯವರ ಪರಿಚಯವನ್ನು ಮಾಜಿ ಅಧ್ಯಕ್ಷರಾದ ಶ್ರೀಮತಿ ಡಾ. ಸುನೀತಾ ಸಜ್ಜನ್ , ಶ್ರೀಮತಿ ಪ್ರೇಮಾ ಗುಳಗೌಡರ ಅವರ ಪರಿಚಯವನ್ನು ಶ್ರೀಮತಿ ಸುಧಾ ಮುತ್ತಗಿ ಅವರು ಮಾಡಿದರು. ಶ್ರೀಮತಿ ವಿಜಯಲಕ್ಷ್ಮಿ ಬಿರಾದಾರ್ ವರ್ಷದ ವರದಿಯನ್ನು ಸಲ್ಲಿಸಿದರು. ಲಕ್ಕಿ ಲೇಡಿಯಾಗಿ ಶ್ರೀಮತಿ ಅನಿತಾ ಹೆಬಸೂರ ಹಾಗೂ ಶ್ರೀಮತಿ ಪ್ರೀತಿ ಶಿವಪ್ಪನ ಮಠ ಆಯ್ಕೆಯಾದರು. ಶ್ರೀಮತಿ ಅನನ್ಯ ಪಾಟೀಲ್, ಶ್ರೀಮತಿ ಕುಸುಮಾ ಜಕ್ಕನ್ ಗೌಡರ, ಶ್ರೀಮತಿ ಮೇಘನಾ ಹೊಸಮನಿ, ಶ್ರೀಮತಿ ಸವಿತಾ ಖಟವಟೆ, ಶ್ರೀಮತಿ ಅಶ್ವಿನಿ ಮದಗುಂಡಿ ಅವರು ಹೊಸ ಸದಸ್ಯರಾಗಿ ಸೇರ್ಪಡೆಯಾದರು . ಜುಲೈ ತಿಂಗಳಿನಲ್ಲಿ ಹುಟ್ಟುಹಬ್ಬ ಹಾಗೂ ಮದುವೆಯ ವಾರ್ಷಿಕೋತ್ಸವದವರಿಗೆ ಪರಿಸರ ಸ್ನೇಹಿ ಪೆನ್ನುಗಳನ್ನು ಕೊಡುವುದರ ಮೂಲಕ ಶುಭಾಶಯ ಕೋರಲಾಯಿತು. ಎಡಿಟರ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಗೀತಾ ಮಾನ್ವಿ *ರೋಶನಿ * ಅನ್ನುವ ಬುಲೆಟಿನ್ ಬಿಡುಗಡೆ ಮಾಡಿದರು. ಶ್ರೀಮತಿ ಶಾಲಿನಿ ಚೌಗುಲೆ ಕ್ಲಬ್ಬಿನ ಮಹತ್ವ ಹಾಗೂ ಅದರ ಕಾರ್ಯ ವೈಖರಿಯ ಮಹಿಳೆಯರ ಸಮಾಜ ಸೇವೆಯಲ್ಲಿ ಮುಖ್ಯ ಪಾತ್ರ ಹಾಗೂ ಈ ವರ್ಷದ ಘೋಷವಾಕ್ಯವಾದ "HEARTBEAT OF HUMANITY "ಎಂಬುದರ ಅರ್ಥವನ್ನು ತಿಳಿಸಿಕೊಟ್ಟರು. ಅಧ್ಯಕ್ಷ ಶ್ರೀಮತಿ ಪ್ರೀತಿ ಶಿವಪ್ಪನಮಠ ಅವರು ಡಿಸ್ಟಿಕ್ ಎಡಿಟರ್ ಆದ ಶ್ರೀಮತಿ ಶಾಲಿನಿ ಚೌಗುಲೆ ಯವರನ್ನು ಹಾಗೂ ಗೌರವ ಅತಿಥಿ ಪಿ ಡಿ ಸಿ ಆದ ಶ್ರೀಮತಿ ಪ್ರೇಮಾ ಗುಳಗೌಡರ ಅವರನ್ನು ಸನ್ಮಾನಿಸಿದರು. ಶ್ರೀಮತಿ ರಾಣಿ ಚಂದಾವರಿ ಅವರು ವಂದನಾರ್ಪಣೆ ಮಾಡಿದರು . ಡಾ. ಶ್ರೀಮತಿ ರಾಜೇಶ್ವರಿ ಹಿರೇಮಠ ಹಾಗೂ ಡಾ. ಶ್ರೀಮತಿ ಸುಪ್ರಿಯಾ ನಾಲ್ವಾತ್ವಾಡಮಠ ಅವರು ನಿರೂಪಣೆ ಮಾಡಿದರು.
ರಾಣಿ ಚಂದಾವರಿ ಅವರು ಮೊಟ್ಟ ಮೊದಲು ಕ್ಲಬ್ ಫೀಸ್ ಪಾವತಿಸಿದ ಸದಸ್ಯರಿಗೆ ಪ್ರೀತಿಯ ಕಾಣಿಕೆ ಕೊಟ್ಟರು. ಮೊದಲಿಗೆ ಮಾಜಿ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಕವಲೂರ್ ಎರಡನೆಯದಾಗಿ ಮಾಜಿ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಸ್ವಾಮಿ ಮೂರನೆಯದಾಗಿ ಶ್ರೀಮತಿ ಗಿರಿಜಾ ನಲ್ವಾತ್ವಾಡಮಠ್ ಅವರಿಗೆ ನೀಡಿದರು.
ಕ್ಲಬ್ಬಿನ ಎಲ್ಲ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ನೂತನ ಪದಾಧಿಕಾರಿಗಳಿಗೆ ಎಲ್ಲರೂ ಶುಭ ಕೋರಿದರು. ಕೊನೆಯದಾಗಿ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಳಿತು. ಇದರ ಪ್ರಾಯೋಜಕತ್ವವನ್ನು ಮಾಜಿ ಅಧ್ಯಕ್ಷರಗಳಾದ ಶ್ರೀಮತಿ ಆರತಿ ಜೀರಂಕಳಿ ಹಾಗೂ ಶ್ರೀಮತಿ ಶೋಭಾ ಹಿರೇಮಠ ಅವರು ವಹಿಸಿಕೊಂಡಿದ್ದರು.