ರಾಯಚೂರು ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಮೇ.೫ ರಿಂದ ಪ್ರಾರಂಭವಾಗಲಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷಾ ಕೈಪಿಡಿಯಲ್ಲಿ ಕಲಂ ೪೦ ರಡಿ ಧರ್ಮ ಕಲಂ ನಮೂದಿಸದೇ ಇರುವರಿಂದ ಕ್ರೆÊಸ್ತ ಮತ್ತು ಬೌದ್ದ ಧರ್ಮ ಪಾಲನೆ ಮಾಡುವವರು ನೈಜ ಪರಿಶಿಷ್ಟರಿಗೆ ಅನ್ಯಾಯವಾಗಲಿದೆ ಎಂದು ಡಾ.ಅಂಬೇಡ್ಕರ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಂದ್ರ ಮಿತ್ರ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ನ್ಯಾಯಮೂರ್ತಿ ನಾಗಮೋಹನ ದಾಸ್ ನೇತೃತ್ವ ಏಕ ಸದಸ್ಯ ಆಯೋಗ ರಚಿಸಿ ಸಮೀಕ್ಷೆ ನಿಗಽಪಡಿಸಿದೆ. ಸುಪ್ರಿಂಕೋರ್ಟಿನ ಏಳು ಜನ ನ್ಯಾಯಮೂರ್ತಿಗಳ ಪೀಠ ಒಳಮೀಸಲು ಸಮೀಕ್ಷೆಗೆ ರಾಜ್ಯಗಳಿಗೆ ಅಽಕಾರ ನೀಡಿ ಕೆನೆಪದರು ದಾಖಲಿಸಲು ಸೂಚಸಿದೆ. ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ಸಿದ್ದಪಡಿಸಿರುವ ಕೈಪಿಡಿಯಲ್ಲಿ ಧರ್ಮ ಕಲಂ ಇಲ್ಲದೇ ಇರುವದರಿಂದ ಪರಿಶಿಷ್ಟ ಜನಸಂಖ್ಯೆಯಲ್ಲಿ ವ್ಯತ್ಯಾಸವಾಗಲು ಕಾರಣವಾಗಿದೆ.
ಪರಿಶಿಷ್ಟ ಜಾತಿ ಜನರು ಹಿಂದೂಧರ್ಮವನ್ನು ಪಾಲಿಸುತ್ತಾರೆ. ೧೯೩೬ ರಲ್ಲಿ ಪರಿಶಿಷ್ಟ ಜಾತಿ ಪಟ್ಟಿಯನ್ನು ಪ್ರಕಟಿಸಲಾಯಿತು. ಪಟ್ಟಿಯಲ್ಲಿ ಕ್ರೆÊಸ್ತ್ ಮತ್ತು ಬೌದ್ಧ ಧರ್ಮವನ್ನು ಪಾಲನ ಮಾಡುವವರನ್ನು ಕೈ ಬಿಡಲಾಗಿತ್ತು. ೧೯೫೦ ರಲ್ಲಿ ಸಂವಿಧಾನ ಜಾರಿಗೆ ಬಂದ ಪರಿಶ್ಚೇದ ೩೪೧ರ ಪ್ರಕಾರ ಪರಿಶಿಷ್ಟ ಜಾತಿಯವವರು ಹಿಂದೂ ಧರ್ಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂಬುದು ಸೇರಿದೆ. ಆದರೆ ನ್ಯಾ.ನಾಗಮೋಹನ ದಾಸ್ ಆಯೋಗ ಸಮೀಕ್ಷಾ ಕೈಪಡಿಯಲ್ಲಿ ಧರ್ಮದ ಕಲಂ ಇಲ್ಲದೇ ಇರುವದರಿಂದ ಕ್ರೆÊಸ್ತರು, ಬೌದ್ಧರು ಸಹ ಪರಿಶಿಷ್ಟ ಜಾತಿ ಸೇg ಅಪಾಯವಿದೆ. ಶಿಕ್ಷಣ ಮತ್ತು ಉದ್ಯೋಗ ಹಾಗೂ ಸರ್ಕಾರಿ ಸವಲತ್ತುಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ನರಸಿಂಹಲು ಪೋತಗಲ್, ಮಹಾಂತೇಶ ಅಸ್ಕಿಹಾಳ, ಈರಪ್ಪ
ಮಾದಿಗ, ಎ.ಸೋಮಶೇಖರ ಭಂಡಾರಿ ಇದ್ದರು.