ಜಿಲ್ಲೆ

ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಸರ್ಕಾರಿ ಬಸ್: ಮಹಿಳೆಯರು ಸೇರಿದಂತೆ 20ಕ್ಕೂ ಹೆಚ್ಚು ಜನರಿಗೆ ಗಾಯ

ಮಂಡ್ಯ: ತಾಲೂಕಿನ ಸಿದ್ದಯ್ಯನಕೊಪ್ಪಲು ಗೇಟ್ ಬಳಿ ಗುರುವಾರ ಮುಂದೆ ಹೋಗುತ್ತಿದ್ದ ಲಾರಿಗೆ ಹಿಂದಿನಿಂದ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಸವಿತಾ(45), ಸ್ಪೂರ್ತಿ(23), ಕೇಶವರೆಡ್ಡಿ(23), ಧನರಾಜ್(63), ನಾಗಮಣಿ(54), ಲಕ್ಷ್ಮೀದೇವಮ್ಮ(75), ಶಿವಮ್ಮ(40), ಶಶಿಕಲಾ(65), ಆಶಾ(58), ನಾಗಮ್ಮ(63), ಮೀನಾಕ್ಷಿ(40), ಶಶಿಕಾಂತ್(63), ಮಂಗಳಗೌರಿ(42), ಮಹೇಶ್ವರಿ(4), ಕೆಂಪಾಜಮ್ಮ(50) , ದೇವಮ್ಮ(50), ಮೃತ್ಯಂಜಯ(58), ಚನ್ನಬಸವ(65), ದಿನೇಶ್‌ಕುಮಾರ್(40) ಸೇರಿದಂತೆ ಹಲವರು ಗಾಯಗೊಂಡವರು.

ಮಂಡ್ಯ ಕಡೆಯಿಂದ ಮೈಸೂರಿಗೆ ತೆರಳುತ್ತಿದ್ದ ವೇಳೆ ಲಾರಿ ಚಾಲಕ ದಿಢೀರ್ ಬ್ರೇಕ್ ಹಾಕಿದಾಗ ಹಿಂದಿನಿಂದ ಬಸ್ ಡಿಕ್ಕಿ ಹೊಡೆದಿದೆ. ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಗ್ರಾಮಾಂತರ ಠಾಣೆ ಪೊಲೀಸರು, ಸಾರ್ವಜನಿಕರ ಸಹಕಾರದಿಂದ ಗಾಯಾಳುಗಳನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಕೆಲವರಿಗೆ ಕೈ, ಕಾಲುಗಳಿಗೆ ತೀವ್ರ ಪೆಟ್ಟು ಬಿದ್ದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.