ಮಸ್ಕಿ: ಮುದಬಾಳ ಕ್ರಾಸ್ ಬಳಿ ಭಾನುವಾರ ಎತ್ತಿನಬಂಡಿ ಪಲ್ಟಿಯಾಗಿ ಅಂಕುಶದೊಡ್ಡಿ ಗಂಗಮ್ಮ ಗಾಯಗೊಂಡಿದ್ದರು. ಅದೇ ಮಾರ್ಗದಲ್ಲಿ ಹೊರಟಿದ್ದ ಶಾಸಕ ಆರ್.ಬಸನಗೌಡ ತುರ್ವಿಹಾಳ ಮತ್ತವರ ಬೆಂಬಲಿಗರು, ಕಾರಿನಲ್ಲಿ ಗಂಗಮ್ಮರನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದರು. ಗಂಗಮ್ಮ ಪತಿ ಸಿದ್ದಣ್ಣರೊಂದಿಗೆ ಎತ್ತಿನಬಂಡಿಯಲ್ಲಿ ಜಮೀನಿಗೆ ಹೊರಟಿದ್ದರು. ಮುದಬಾಳ ಕ್ರಾಸ್ ಬಳಿ ವಾಹನಗಳ ಶಬ್ಧಕ್ಕೆ ಎತ್ತುಗಳು ಬೆದರಿದ್ದರಿಂದ ಬಂಡಿ ಪಲ್ಟಿಯಾಗಿದೆ ಎಂದು ಹೇಳಲಾಗುತ್ತಿದೆ.