ಮಂಗಳೂರು: ಉಪ್ಪಿನಂಗಡಿಯಲ್ಲಿ ರಾಷ್ಟ್ರೀಯ ಕಂಪ್ಯೂಟರ್ ಹಾಗೂ ಐಡಿಯಲ್ ಐಟಿಐ ವತಿಯಿಂದ ವಿವಿಧ ಕೌಶಲ್ಯ ತರಬೇತಿ ಉದ್ಘಾಟನಾ ಸಮಾರಂಭ ನಡೆಯಿತು. ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಲಿತಾ ಕಾರ್ಯಕ್ರಮ ಉದ್ಘಾಟಿಸಿದರು.
ಗ್ರಾಪಂ ಸದಸ್ಯ ಕೆ. ಅಬ್ದುಲ್ ರಹಿಮಾನ್ ಮಾತನಾಡಿ, ಇಂದಿನ ಯುವ ಜನತೆಗೆ ಕೌಶಲ್ಯ ತರಬೇತಿಯು ಅತ್ಯಂತ ಅನಿವಾರ್ಯ ಎಂದರು. ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿ ಹಾಗೂ ಐಡಿಯಲ್ ಐಟಿಐ ಈ ನಿಟ್ಟಿನಲ್ಲಿ ಮಾಡುತ್ತಿರುವ ಕೆಲಸ ಕಾರ್ಯದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಇಲ್ಲಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕೆಂದೂ ಪಂಚಾಯಿತಿ ವತಿಯಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದರು.
ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಪ್ರವೀಣ್‌ರಾಜ್ ಎಸ್.ರಾವ್ ಮಾತನಾಡಿ, ಸಂಸ್ಥೆಯು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಈ ಕಾರ್ಯನಿರ್ವಹಿಸುತ್ತಿದ್ದು, ಯುವಜನತೆಯನ್ನು ಕೌಶಲ್ಯ ತರಬೇತಿ ನೀಡಿ ಅವರನ್ನು ದೇಶದ ಪ್ರಗತಿಗೆ ಅಣಿಗೊಳಿಸುವಲ್ಲಿ ಕಾರ್ಯ ಮಾಡಲಾಗುತ್ತಿದೆ ಎಂದರು.
ಪಂಚಾಯಿತಿ ಉಪಾಧ್ಯಕ್ಷರಾದ ವಿದ್ಯಾಲಕ್ಷ್ಮಿ ಪ್ರಭು, ಸಂಸ್ಥೆಯ ತಾಂತ್ರಿಕ ತರಬೇತುದಾರ ಭರತ್ ಹಾಗೂ ಬಿ.ಸಿ ರೋಡ್ ಸಂಸ್ಥೆಯ ಗೀತಾ ಲಕ್ಷ್ಮಣ, ಗೀತಾ ಕಲ್ಲಡ್ಕ, ಮುರಳಿ ರಾವ್ ಮೆಲ್ಕಾರ್, ಮಧುಶ್ರೀ ವಿಟ್ಲ, ಗ್ರಾಪಂ ಸದಸ್ಯರಾದ ನಿರ್ಮಲ ರಾವ್, ಧನಂಜಯ ಕುಮಾರ್, ಮಹಮ್ಮದ್ ತೌಶೀದ್ ಯು.ಟಿ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಸಂಚಾಲಕ ನಾಗೇಂದ್ರ ರಾವ್ ಸ್ವಾಗತಿಸಿದರು. ಶಂಕರನಾರಾಯಣ ಭಟ್ ಪುತ್ತೂರು ಅವರು ಸಂಸ್ಥೆಯ ಕಿರು ಪರಿಚಯ ಮಾಡಿದರು. ನಾಗೇಂದ್ರ ರಾವ್ ವಂದಿಸಿದರು.