ಹಾಲಾಪುರದಲ್ಲಿ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿಗೆ ಶಾಸಕ ಬಸನಗೌಡ ತುರ್ವಿಹಾಳ ಭಾನುವಾರ ಭೂಮಿ ಪೂಜೆ ನೆರವೇರಿಸಿದರು. ಪ್ರಮುಖರಾದ ದೊಡ್ಡ ಮಲ್ಲಯ್ಯಸ್ವಾಮಿ, ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ರವಿ ದೇಸಾಯಿ, ಚಂದಪ್ಪ, ಬಸವರಾಜ ಇತರರಿದ್ದರು. 
ಜಿಲ್ಲೆ

ಮೂಲಸೌಲಭ್ಯ ಸಮಸ್ಯೆ ನಿವಾರಣೆಗೆ ಗಮನ

ನರೇಶ್ ಕುಮಾರ್

ಕವಿತಾಳ: ಸಮೀಪದ ಹಾಲಾಪುರ ಗ್ರಾಮದಲ್ಲಿ ಮುಖ್ಯರಸ್ತೆ ವಿಸ್ತರಣೆ ಹಾಗೂ ಜೋಳದರಾಶಿ ಕ್ಯಾಂಪ್‌ನಿಂದ ಕೊಟೆಕಲ್‌ವರೆಗಿನ ರಸ್ತೆ ಕಾಮಗಾರಿಗೆ ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಭಾನುವಾರ ಚಾಲನೆ ನೀಡಿದರು.

ತಾಲೂಕಿನಲ್ಲಿಯೇ ಹಾಲಾಪುರ ದೊಡ್ಡ ಗ್ರಾಮವಾಗಿದೆ. ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಒಂದು ಕೋಟಿ ರೂ. ವೆಚ್ಚದಲ್ಲಿ ರಸ್ತೆ ವಿಸ್ತರಣೆ ಹಾಗೂ ಐದು ಕೋಟಿ ರೂ. ವೆಚ್ಚದಲ್ಲಿ ಜೋಳದರಾಶಿ ಕ್ಯಾಂಪ್-ಕೊಟೆಕಲ್ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ.

ಮುಂದಿನ ದಿನದಲ್ಲಿ ಮುಖ್ಯರಸ್ತೆಗೆ ಡಿವೈಡರ್ ನಿರ್ಮಿಸಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ ಬದ್ಧನಾಗಿದ್ದು, ವಿವಿಧೆಡೆ ಶಾಲಾ ಕಟ್ಟಡಗಳು, ರಸ್ತೆಗಳು ಕುಡಿವ ನೀರು ಸೇರಿದಂತೆ ಮೂಲಸೌಲಭ್ಯ ಸಮಸ್ಯೆಗಳ ನಿವಾರಣೆಗೆ ಗಮನಹರಿಸಲಾಗುವುದು ಎಂದು ತಿಳಿಸಿದರು.

ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಗ್ರಾಪಂ ಮಾಜಿ ಅಧ್ಯಕ್ಷ ರವಿ ದೇಸಾಯಿ, ಕರೆಯಪ್ಪ ಬೆಂಗಳೂರು, ತಾಪಂ ಮಾಜಿ ಸದಸ್ಯ ಕರೆಯಪ್ಪ ಮೆಡಿಕಲ್, ಗ್ರಾಪಂ ಸದಸ್ಯ ಚಂದಪ್ಪ, ರವಿ ಕುಮಾರ, ಬಸವರಾಜ, ಲೋಕೋಪಯೋಗಿ ಇಲಾಖೆ ಅಧಿಕಾರಿ ಮಹ್ಮದ್ ಅಸ್ಲಂ ಇದ್ದರು.