ಜಿಲ್ಲೆ

ಜನತಾ ಸಂಸ್ಥೆಯಲ್ಲಿ ಮಾಹಿತಿ ಕಾರ್ಯಾಗಾರ

ಇಂದಿರಾ ಎನ್ ಕೆ

ಕೋಟ: ಕೋಟದ ಜನತಾ ಸಂಸ್ಥೆಯ ಆವರಣದಲ್ಲಿ ಸಂಸ್ಥೆಯ ಸಿಬ್ಬಂದಿಗಾಗಿ ಉದ್ಯೋಗಿ ಸುರಕ್ಷತಾ ಉಪಕರಣಗಳ ವಿತರಣಾ ಸಂಸ್ಥೆಯಿಂದ ಸುರಕ್ಷತಾ ಪರಿಕರಗಳ ಪ್ರದರ್ಶನ ಮತ್ತು ಮಾಹಿತಿ ಕಾರ್ಯಾಗಾರ ಇತ್ತೀಚೆಗೆ ನಡೆಯಿತು. ಸಂಸ್ಥೆ ಮುಖ್ಯಸ್ಥ ಆನಂದ ಸಿ.ಕುಂದರ್ ಉದ್ಘಾಟಿಸಿ ಮಾತನಾಡಿ, ಕಾರ್ಖಾನೆಗಳ ಸುರಕ್ಷಿತ ವಾತಾವರಣವೇ ಕಾರ್ಮಿಕನಿಗೆ ಶ್ರೀರಕ್ಷೆ. ಎಲ್ಲರೂ ಒಂದಾಗಿ ಸುರಕ್ಷಿತ ವಾತಾವರಣ ನಿರ್ಮಿಸಲು ಪಣ ತೋಡೋಣ ಎಂದರು. ಕಾರ್ಖಾನೆ ನಿರ್ದೇಶಕ ರಕ್ಷಿತ್ ಕುಂದರ್, ಎಜಿಎಂ ಶ್ರೀನಿವಾಸ್ ಕುಂದರ್, ವ್ಯವಸ್ಥಾಪಕ ಮಿಥುನ್ ಕುಮಾರ್, ಸುರಕ್ಷತಾ ಅಧಿಕಾರಿ ಕಾರ್ತಿಕ ಆಚಾರ್ಯ ಉಪಸ್ಥಿತರಿದ್ದರು.