ಮಾದಕ ವಸ್ತುಗಳ ದುಷ್ಪರಿಣಾಮಗಳ ಮಾಹಿತಿ ಕಾರ್ಯಾಗಾರವನ್ನು ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ ಉದ್ಘಾಟಿಸಿದರು 
ಜಿಲ್ಲೆ

ಹಠ ಹಿಡಿದು ತಿನ್ನುವುದು ಚಟ : ಅಶ್ವಿನ್ ಶೆಟ್ಟಿ ಅಭಿಪ್ರಾಯ

ಇಂದಿರಾ ಎನ್ ಕೆ

ಪುತ್ತೂರು ಗ್ರಾಮಾಂತರ: ಮಾದಕ ವಸ್ತುಗಳು ಪ್ರತಿನಿತ್ಯ ನಾವು ತಿನ್ನುವ ಆಹಾರಗಳಲ್ಲಿ, ನಾವು ಯೋಚಿಸುವ ಯೋಚನೆಗಳಲ್ಲಿ, ವರ್ತನೆಗಳಲ್ಲಿ ಅಡಗಿದೆ. ಮಾತ್ರವಲ್ಲದೆ ಮಾದಕತೆ ನಮಗೆ ಗೊತ್ತಾಗದಂತೆ ನಮ್ಮ ದಾರಿ ತಪ್ಪಿಸುವ ಮಿದುಳಿನಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯಾಗಿದೆ ಎಂದು ಸವಣೂರಿನ ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ ಅಭಿಪ್ರಾಯಪಟ್ಟರು.

ವೀರಮಂಗಲದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಸಂಭ್ರಮ ಶನಿವಾರ’ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ಮಾದಕ ವಸ್ತುಗಳ ದುಷ್ಪರಿಣಾಮಗಳ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಯಾವ ಆಹಾರವಾಗಲಿ ಅದು ನಮಗೆ ಬೇಕೇ ಬೇಕು ಎಂದು ಹಟ ಹಿಡಿದು ಸೇವಿಸುತ್ತೇವೆಯೋ ಅದೇ ಚಟವಾಗುತ್ತದೆ. ಅದುವೆ ಮಾದಕತೆ ಎಂದು ತಿಳಿಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಅನುಪಮ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ಕುಮಾರ್, ವನ ಚಾರಿಟೆಬಲ್ ಟ್ರಸ್ಟ್‌ನ ಜೀತ್ ಮಿಲನ್ ರೋಚ್, ಮಿಯಾವಾಕಿ ವನದ ಮಹೇಶ್ ಕುಂಜೂರುಪಂಜ, ಎಸ್‌ಡಿಎಂಸಿ ಉಪಾಧ್ಯಕ್ಷ ರಝಾಕ್, ಸದಸ್ಯರಾದ ಸುರೇಶ್ ಗಂಡಿ, ಸಮೀರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಮುನಾ ಅತಿಥಿಗಳಾಗಿದ್ದರು.

ಮುಖ್ಯಶಿಕ್ಷಕ ತಾರಾನಾಥ ಸವಣೂರು ಸ್ವಾಗತಿಸಿ, ಶಿಕ್ಷಕಿಯರಾದ ಹರಿಣಾಕ್ಷಿ, ಶೋಭಾ, ಹೇಮಾವತಿ ಶ್ರೀಲತಾ, ಕವಿತಾ, ಶಿಲ್ಪರಾಣಿ, ಸೌಮ್ಯ, ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕಿಯರಾದ ಸವಿತಾ, ಸಂಚನಾ, ಭವ್ಯ, ಚಂದ್ರಾವತಿ ಮತ್ತಿತರರು ಉಪಸ್ಥಿತರಿದ್ದರು. ತಾಯಂದಿರ ಸಮಿತಿಯ ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಮಧ್ಯಾಹ್ನ ಆಟಿದ ತಿನಿಸುಗಳ ಸಹಭೋಜನ ವ್ಯವಸ್ಥೆ ಮಾಡಲಾಗಿತ್ತು.