ಮೂಲ್ಕಿ: ಅಡುಗೆ ಅನಿಲದ ಸಿಲಿಂಡರ್ ಗಾಳಿಯಾಡುವ ಪ್ರದೇಶದಲ್ಲಿ ಇರಿಸಿ ಸಮಯ ಸಂದರ್ಭಗಳಲ್ಲಿ ಅದರ ಪೈಪ್ ಹಾಗೂ ಸಂಪರ್ಕ ವ್ಯವಸ್ಥೆ ಪರಿಶೀಲಿಸುತ್ತಿದ್ದಲ್ಲಿ ಸಂಭಾವ್ಯ ಅಪಾಯ ತಪ್ಪಿಸಬಹುದಾಗಿದೆ ಎಂದು ಮೂಲ್ಕಿ ಪ್ರಿಯಾಂಕ ಗ್ಯಾಸ್ ಏಜೆನ್ಸಿ ರಂಗನಾಥ್ ಹೇಳಿದರು.
ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಅಡುಗೆ ಅನಿಲ ಸೋರಿಕೆಯಾದ ಸಂದರ್ಭ ಸುರಕ್ಷತೆ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆರೆಕಾಡು ದುರ್ಗಾಪರಮೇಶ್ವರಿ ಭಜನಾ ಮಂದಿರ ಅಧ್ಯಕ್ಷ ರಾಜೇಶ್ ಕೆರೆಕಾಡು, ಉಪಾಧ್ಯಕ್ಷ ಕರುಣಾಕರ್, ಶ್ರೀನಿವಾಸ್ ಆಚಾರ್ಯ, ಧನಂಜಯ ಶೆಟ್ಟಿಗಾರ್, ಮಾಜಿ ಪಂಚಾಯಿತಿ ಉಪಾಧ್ಯಕ್ಷರಾದ ಸುರೇಖಾ, ಪ್ರಶಾಂತ್ ಆಚಾರ್ಯ, ಸಿಬ್ಬಂದಿ ಮಾರುತಿ ಪ್ರಸಾದ್, ಆನಂದ್ ಕುಮಾರ್, ಮಂಜುನಾಥ್, ಪುಟ್ಟರಾಜ್, ನರೇಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.