ಬೆಳಗಾವಿ: ನಗರದ ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಕಾಲೇಜಿನ ಗಣಿತಶಾಸ ಮತ್ತು ಸಂಖ್ಯಾಶಾಸ ವಿಭಾಗಗಳ ವತಿಯಿಂದ ಕೇಂದ್ರ ಸರ್ಕಾರದಲ್ಲಿನ ಉದ್ಯೋಗಾವಕಾಶ ಎಂಬ ವಿಷಯದ ಕುರಿತು ಕಾಲೇಜಿನ ಸರ್ ಸಿ.ವಿ. ರಾಮನ್ ಸಭಾಂಗಣದಲ್ಲಿ ಶುಕ್ರವಾರ ಕಾರ್ಯಾಗಾರ ನಡೆಯಿತು.
ಬೆಳಗಾವಿಯ ನವದಿಶಾ ಅಕಾಡೆಮಿ ಸಂಸ್ಥಾಪಕ ಪ್ರವಿಣ ಅತಿಥಿಯಾಗಿ ಆಗಮಿಸಿ ಕೇಂದ್ರ ಸರ್ಕಾರದಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳ ಮಾಹಿತಿ ನೀಡಿದರು. ಆ ಉದ್ಯೋಗಗಳಿಗೆ ಆಯ್ಕೆಯಾಗಿ ಮಾಡಬೇಕಾದ ಅಧ್ಯಯನದ ವಿಷಯ ಮತ್ತು ತಯಾರಿಗಳ ಕುರಿತು ವಿವರಿಸಿದರು.
ಪ್ರಾಚಾಯೆರ್ ಡಾ.ಜ್ಯೋತಿ ಕವಳೇಕರ ಅಧ್ಯಕ್ಷತೆ ವಹಿಸಿದ್ದರು. ಸಂಖ್ಯಾಶಾಸ ವಿಭಾಗದ ಮುಖ್ಯಸ್ಥೆ ಅಜಿತ್ ಸುತಾರ ಸ್ವಾಗತಿಸಿದರು. ಗಣಿತಶಾಸ ವಿಭಾಗದ ಮುಖ್ಯಸ್ಥೆ ಸುಧಾ ಸರೀಕರ ಪರಿಚಯಿಸಿದರು. ಉಪನ್ಯಾಸಕಿ ರೇಖಾ ಚವ್ಹಾಣ ವಂದಿಸಿದರು. ಗಣಿತಶಾಸ ಸಂದ ಅಧ್ಯಕ್ಷೆ ಡಾ.ವಿಜಯಲಕ್ಷಿ$್ಮ ಪಾಟೀಲ ಉಪಸ್ಥಿತರಿದ್ದರು. ಕಿರಣ ಸುನತರಕರ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು. 90ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದರು.