ಜಿಲ್ಲೆ

ಜಿಲ್ಲಾಡಳಿತಕ್ಕೆ ಆಗಮಿಸುವ ಸಾರ್ವಜನಿಕರಿಗೆ ಮಾಹಿತಿ ನೀಡುವಲ್ಲಿ ನೆರವಾದ ಮಾಹಿತಿ ಕೋಶ.

Gadag - Shivanand Hiremath

ಗದಗ: ಜಿಲ್ಲಾಡಳಿತ  ಭವನದಲ್ಲಿ ಹೊಸದಾಗಿ ಪ್ರಾರಂಭಿಸಿದ ಮಾಹಿತಿ ಕೋಶ  ಕಛೇರಿ ಕೆಲಸ ಕಾರ್ಯಗಳ ಹಾಗೂ ವಿವಿಧ ಇಲಾಖೆಗಳ ಮಾಹಿತಿ ಒದಗಿಸುವಲ್ಲಿ ಸಾರ್ವಜನಿಕರಿಗೆ ನೆರವಾಗಿದೆ.

ಜಿಲ್ಲಾಡಳಿತ ಭವನದ ಮುಖ್ಯ ಧ್ವಾರದಲ್ಲಿ ಆಗಮಿಸಿದಲ್ಲಿ ಎದುರಿಗೆ ಸಹಾಯವಾಣಿ ಕೇಂದ್ರದ ಬಲ ಭಾಗದಲ್ಲಿ ಕಂಟ್ರೋಲ್ ರೂಮ್, ಎಡ ಭಾಗದಲ್ಲಿ ಮಾಹಿತಿ ಕೋಶ ಮೂಲಕ. ಮಾಹಿತಿ ಕೋಶದ ಪಕ್ಕದಲ್ಲಿ ಐಇಆ ಸ್ಮಾರ್ಟ್ ಟಿವಿ ಅಳವಡಿಸಲಾಗಿದೆ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಸ್ತ್ರೀಶಕ್ತಿ ಯೋಜನೆ, ಗೃಹ ಲಕ್ಷ್ಮೀ ಯೋಜನೆ, ಗೃಹ ಜ್ಯೋತಿ ಯೋಜನೆ, ಯುವ ನಿಧಿ ಹೀಗೆ ಸರ್ಕಾರದ  ಯೋಜನೆಗಳು ಹಾಗೂ ಸರ್ಕಾರದ ಭಿತ್ತಿ ಪತ್ರಗಳು,  ಜಿಲ್ಲೆಯ ಪ್ರವಾಸಿ  ಸ್ಥಳಗಳ ಬಗ್ಗೆ ವಿದ್ಯುನ್ಮಾನದ ಚಿತ್ರಗಳೊಂದಿಗೆ ಜನರಿಗೆ ಪರಿಚಯಿಸಲಾಗುತ್ತದೆ.

ಜಿಲ್ಲೆಯ ಪ್ರವಾಸಿ ಸ್ಥಳಗಳಾದ ಲಕ್ಕುಂಡಿ, ಸಬರಮತ್ತಿ ಆಶ್ರಮ , ಬಸವೇಶ್ವರ ಪುತ್ಥಳಿ , ಬಿಂಕದಕಟ್ಟಿ ಮೃಗಾಲಯ, ಭೀಷ್ಮಕೇರೆ, ಮಾಗಡಿ ಕೇರೆಯ ಸಂಪೂರ್ಣ ಚಿತ್ರಣವನ್ನು ಡ್ರೋಣ ಮೂಲಕ ಚಿತ್ರಿಸಲಾಗಿದೆ. ಜೊತೆಗೆ  ಓದುಗ ಪ್ರೀಯರಿಗೆ ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಕೈಪಿಡಿಗಳನ್ನು ನಾವು ನೋಡಬಹುದು. ಹಾಗೇ ಜಿಲ್ಲಾಡಳಿತ ಭವನದಲ್ಲಿ ಇರುವ ಎಲ್ಲಾ ಕಛೇರಿಗಳ ಕೊಠಡಿಗಳ ಸಂಖ್ಯೆ ಹಾಗೂ ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ಸಹ ಮಾಹಿತಿ ಕೋಶದ ಹತ್ತಿರ ಕಲ್ಪಿಸಲಾಗಿದೆ.  ಮಾಹಿತಿ ಕೋಶದ  ಮುಂಭಾಗದಲ್ಲಿ ಜಿಲ್ಲಾಡಳಿತ ಭವನಕ್ಕೆ ಬರುವ ಜನರಿಗೆ ಕುಳಿತುಕೊಳ್ಳಲು ಸ್ಟೀಲ್ ಕುರ್ಚಿಗಳನ್ನು ಹಾಕಲಾಗಿದೆ.  ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಯು ಸಹ ಕಲ್ಪಿಸಲಾಗಿದೆ.

ರಾಜ್ಯ ಕಾನೂನು ಮತ್ತು ಮಾನವ ಹಕ್ಕುಗಳ ಸಂಸದೀಯ ವ್ಯವಹಾರಗಳ ಶಾಸನ ರಚೆನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ.ಪಾಟೀಲ ಅವರ  ಜನಪರ ಕಾರ್ಯಗಳ ಆಶಯದೊಂದಿಗೆ ಸಾಕಾರಗೊಂಡು  ಮಾಹಿತಿ  ಕೇಂದ್ರವು ಆಗಸ್ಟ 15 ರಂದು  ಉದ್ಘಾಟನೆಗೊಂಡಿತು.

ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್. ಅವರ ದಕ್ಷ ಆಡಳಿತದಿಂದಾಗಿ ಸಾರ್ವಜನಿಕರಿಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಮಾಹಿತಿಗಳು, ಅವುಗಳನ್ನು ಪಡೆಯುವ ಅರ್ಹರು ಸಲ್ಲಿಸಬೇಕಾದ ದಾಖಲೆಗಳ ಮಾಹಿತಿಯನ್ನು ನೂತನ ಮಾಹಿತಿ ಕೋಶದಲ್ಲಿ ಪ್ರದರ್ಶನವಾಗುತ್ತದೆ. ಇದನ್ನು ವೀಕ್ಷಿಸಿದ ಸಾರ್ವಜನಿಕರು ಸರ್ಕಾರದ ಸೌಲಭ್ಯಗಳನ್ನು ಸಂಬಂಧಿಸಿದ ಇಲಾಖೆಯಿಂದ ಪಡೆಯಲು ಅನುಕೂಲವಾಗಿದೆ. ಮಾಹಿತಿ ಕೋಶದಲ್ಲಿ ಮೂರು ಜನ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿರುವರು. ಕಛೇರಿಯ ಸಮಯದಲ್ಲಿ ಕಾರ್ಯನಿರ್ವಹಿಸುತ್ತದೆ.

ಸಾರ್ವಜನಿಕ ಮಾಹಿತಿ .
ಸಹಾಯವಾಣಿ ಕೇಂದ್ರ ಪ್ರಾರಂಭವಾಗಿದ್ದರಿಂದ ಜಿಲ್ಲೆಯ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದೆ. ಸಹಾಯವಾಣಿ ಕೇಂದ್ರದಲ್ಲಿ ಮಾಹಿತಿ ಪಡೆದು ನಮಗೆ ಬೇಕಾದ ಕಛೇರಿಗೆ ತೆರಳಿ ಕೆಲಸವನ್ನು ಮುಗಿಸಿಕೊಂಡು ಮರಳಿ ಊರಿಗೆ ತೆರಳಲು ನಮಗೆ ಸಂತೋಷ ತಂದಿದೆ. ಹೀಗೆ ಜಿಲ್ಲಾಡಳಿತದಲ್ಲಿ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುವ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿರುವುದು ನಮಗೆ ಸಂತೋಷ ತಂದಿದೆ.  
ಅಶೋಕ ಯಮನಪ್ಪ ಹುಡಕೇರಿ  ಸಾ.ಯಾವಗಲ. ರೋಣ ತಾಲ್ಲೂಕ
ಸಹಾಯವಾಣಿ ಕೋಶದಿಂದ ಸಾರ್ವಜನಿಕರಿಗೆ ಉಪಯುಕ್ತವಾದ ಮಾಹಿತಿ ದೊರೆಯುತ್ತಿದೆ. ಮೊದಲಿಗೆ  ಜಿಲ್ಲಾಧಿಕಾರಿ ಹಾಗೂ ಯಾವುದೇ ಸರ್ಕಾರಿ ಕಛೇರಿಗೆ ತೆರಲಿ ನಮ್ಮ ಕೆಲಸ ಕಾರ್ಯವನ್ನು ಮಾಡುವುದಕ್ಕೆ ಹಾಗೂ ಸಂಪೂರ್ಣ ವಿಷಯ ತಿಳಿಯುವುದಕ್ಕೆ ಈ ಸಹಾಯವಾಣಿ ಕೇಂದ್ರ ಸೂಕ್ತವಾಗಿದೆ.

ಎಫ್.ಐ.ದೊಡ್ಡಮನಿ ವಕೀಲರು. ನರಗುಂದ

ಸಾರ್ವಜನಿಕರಿಗೆ ಸರಿಯಾದ ಸಮಯಕ್ಕೆ ಅವರ ಕೆಲಸ ಕಾರ್ಯಗಳು  ಹಾಗೂ ಇಲಾಖೆಯ ಅರ್ಜಿಗಳನ್ನು ಸಹಾಯವಾಣಿ ಮಾಹಿತಿ  ಕೋಶದ ಮೂಲಕ ಸಂಬಂಧಿಸಿದ ಕಛೇರಿಗೆ ತಲುಪಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಿರುವುದು ಒಳ್ಳೆಯದು.
ವಿಜಯ ಪೆÇೀತ್ತಿನ .ನರಗುಂದ

ಮಾಹಿತಿ ಕೋಶದ ಮೂಲಕ ಜನರಿಗೆ ರಾಜ್ಯ ಸರ್ಕಾರದ ಯೋಜನೆಗಳ ಕುರಿತು  ಸಾರ್ವಜನಿಕರಿಗೆ  ಮಾಹಿತಿ ನೀಡುವ ಕೆಲಸವನ್ನು ಜಿಲ್ಲಾಡಳಿತ ಭವನದಲ್ಲಿ ಸಹಾಯವಾಣಿ ಕೋಶದ ಪಕ್ಕದಲ್ಲಿ ಇರುವ ಮಾಹಿತಿ ಕೋಶದ ಎಲ್.ಇ.ಡಿ.  ಟಿವಿಯಲ್ಲಿ ರಾಜ್ಯ ಸರ್ಕಾರದ ಯೋಜನೆಗಳು ಹಾಗೂ ಜಿಲ್ಲೆಯ ಪ್ರವಾಸಿ ತಾಣಗಳನ್ನು ವಿದ್ಯುನ್ಮಾದ ಮೂಲಕ ಚಿತ್ರಿಸಿ ಸಾರ್ವಜನಿಕರಿಗೆ ಮಾಹಿತಿ ನೀಡುತಿರುವುದು ಉಪಯುಕ್ತವಾಗಿದೆ.
ಸೌಮ್ಯ ಬೆಟಗೇರಿಮಠ . ಅಂತೂರ ಬೆಂತುರೂ.  ಜಿಲ್ಲಾ ಗದಗ