ಕುಶಾಲನಗರದ ಜೆಎಸ್‌ಎಸ್ ತಾಂತ್ರಿಕ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಬುಧವಾರ ಆಯೋಜಿಸಿದ್ದ ಪರಿಚಯಾತ್ಮಕ ಕಾರ್ಯಕ್ರಮವನ್ನು ಡಾ.ಕೆ.ಎಸ್. ಪ್ರಕಾಶ್ ಉದ್ಘಾಟಿಸಿದರು. ಪ್ರಾಚಾರ್ಯ ಡಾ. ಸತೀಶ್, ಉಪನ್ಯಾಸಕ ಜಿ. ಶ್ರೀನಾಥ್ ಇತರರು ಹಾಜರಿದ್ದರು. 
ಜಿಲ್ಲೆ

ಆಶಾವಾದಿಗಳಾಗಿದ್ದರೆ ಅನಂತ ಅವಕಾಶ

ಕುಶಾಲನಗರ: ಆಶಾವಾದಿಗಳಾಗಿದ್ದರೆ ಅನಂತ ಅವಕಾಶ ಲಭ್ಯವಾಗುತ್ತದೆ ಎಂದು ನಿವೃತ್ತ ಕುಲಸಚಿವ ಡಾ.ಕೆ.ಎಸ್. ಪ್ರಕಾಶ್ ಹೇಳಿದರು.

ಜೆಎಸ್‌ಎಸ್ ತಾಂತ್ರಿಕ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಬುಧವಾರ ಆಯೋಜಿಸಿದ್ದ ಪರಿಚಯಾತ್ಮಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಪ್ರಾಯೋಗಿಕವಾಗಿರಬೇಕು. ಜ್ಞಾನಾರ್ಜನೆ ಮಾಡಿ ಸುಭದ್ರ ದೇಶ ಕಟ್ಟಲು ಸಿದ್ಧರಾಗಬೇಕು ಎಂದರು.

ಪ್ರಸ್ತುತ ಜೀವನವು ತಾಂತ್ರಿಕತೆಗೇ ಹೆಚ್ಚು ಹೊಂದಿಕೊಂಡಿದೆ ಎಂದ ಅವರು, ತಂದೆ- ತಾಯಿಗಳಿಗೆ ಉತ್ತಮ ಮಕ್ಕಳಾಗಿ ಬದುಕಬೇಕು ಎಂದು ಸಲಹೆ ನೀಡಿದರು. ಪ್ರಾಂಶುಪಾಲ ಡಾ.ಸತೀಶ್, ಕಾಲೇಜು ಬೆಳೆದುಬಂದ ದಾರಿ ಹಾಗೂ ಶೈಕ್ಷಣಿಕ ಸೌಲಭ್ಯಗಳ ಬಗ್ಗೆ ವಿವರಿಸಿದರು. ಉಪನ್ಯಾಸಕ ಜಿ. ಶ್ರೀನಾಥ, ಸಹಾಯಕ ಪ್ರಾಧ್ಯಾಪರಾದ ರೂಪಶ್ರೀ, ವಿಶ್ವನಾಥ, ರತನ್ ಕುಮಾರ್, ರೂಪಾ ಇದ್ದರು.