ಜಿಲ್ಲೆ

ಬಂಜೆತನ ಸಮಸ್ಯೆಗೆ ಚಿಂತಿಸಬೇಕಿಲ್ಲ

ಪ್ರಶಾಂತ ಹೂಗಾರ

ಕಾಗವಾಡ: ಆಧುನಿಕ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಬೆಳೆದಿದ್ದು, ಬಂಜೆತನದ ಸಮಸ್ಯೆಗೆ ಚಿಂತಿಸಬೇಕಾಗಿಲ್ಲ ಎಂದು ಮಿರಜದ ಸಚಿನ್ ಟೆಸ್ಟ್‌ಟ್ಯೂಬ್ ಬೇಬಿ ಸೆಂಟರ್‌ನ ವೈದ್ಯ ಡಾ.ಸಚಿನ ಸುಗಣ್ಣವರ ಹೇಳಿದರು.

ಮಿರಜದ ಸಚಿನ ಟೆಸ್ಟ್‌ಟ್ಯೂಬ್ ಬೇಬಿ ಸೆಂಟರ್ ಆಸ್ಪತ್ರೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬಂಜೆತನ ನಿವಾರಣೆ ಮತ್ತು ಸ್ತ್ರೀ ರೋಗಗಳ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿ, ವಿದೇಶದಲ್ಲಿ ಬಂಜೆತನ ನಿವಾರಣೆಗೆ ಬಳಸುವ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಸಚಿನ ಆಸ್ಪತ್ರೆಯಲ್ಲಿ ಲಭ್ಯವಿದ್ಯು, ಕರ್ನಾಟಕ, ಮಹಾರಾಷ್ಟ್ರ ಗಡಿ ಭಾಗದ ಸಾವಿರಾರು ಜನರು ಚಿಕಿತ್ಸೆ ಪಡೆದು, ಸಂತಾನ ಭಾಗ್ಯ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು. ಡಾ. ನೇಹಾ ಸುಗಣ್ಣವರ ಇತರರು ಇದ್ದರು.