ಜಿಲ್ಲೆ

ಬಂಜೆತನ ಸಮಸ್ಯೆಗೆ ಚಿಂತಿಸಬೇಕಿಲ್ಲ

ಎಂ.ಎಸ್​.ಹಿರೇಮಠ ಬೆಳಗಾವಿ

ಕಾಗವಾಡ: ಆಧುನಿಕ ವೈದ್ಯಕಿಯ ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಬೆಳೆದಿದ್ದು, ಬಂಜೆತನದ ಸಮಸ್ಯೆಗೆ ಚಿಂತಿಸಬೇಕಾಗಿಲ್ಲ ಎಂದು ಮಿರಜದ ಸಚಿನ್​ ಟೆಸ್ಟ್​ಟ್ಯೂಬ್​ ಬೇಬಿ ಸೆಂಟರ್​ನ ವೈದ್ಯ ಡಾ. ಸಚಿನ ಸುಗಣ್ಣವರ ಹೇಳಿದರು.

ಮಿರಜ್​ದ ಸಚಿನ ಟೆಸ್ಟ್​ಟ್ಯೂಬ್​ ಬೇಬಿ ಸೆಂಟರ್​ ಆಸ್ಪತ್ರೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬಂಜೆತನ ನಿವಾರಣೆ ಮತ್ತು ಸ್ತ್ರೀ ರೋಗಗಳ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ವಿದೇಶದಲ್ಲಿ ಬಂಜೆತನ ನಿವಾರಣೆಗೆ ಬಳಸುವ ಅತ್ಯಾಧುನಿಕ ವೈದ್ಯಕಿಯ ಸೌಲಭ್ಯಗಳು ಸಚಿನ ಆಸ್ಪತ್ರೆಯಲ್ಲಿ ಲಭ್ಯವಿದ್ಯು, ಕರ್ನಾಟಕ, ಮಹಾರಾಷ್ಟ್ರದ ಗಡಿ ಭಾಗದ ಸಾವಿರಾರು ಜನ ಚಿಕಿತ್ಸೆ ಮೂಲಕ ಸಂತಾನ ಭಾಗ್ಯ ಪಡೆದುಕೊಂಡಿದ್ದಾರೆ.

ಬಂಜೆತನದ ಸಮಸ್ಯೆಯಿಂದ ಬಳಲುವರು ಸಮಸ್ಯೆ ಪರಿಹಾರಕ್ಕಾಗಿ ಮೊ. 09765010834 ಸಂಪರ್ಕಿಸಬಹುದು ಎಂದು ತಿಳಿಸಿದರು. ಡಾ. ನೇಹಾ ಸುಗಣ್ಣವರ ಇತರರು ಇದ್ದರು.