ಜಿಲ್ಲೆ

ಬಂಜೆತನ ನಿವಾರಣೆ ಉಚಿತ ಶಿಬಿರ 11ಕ್ಕೆ

ಕಾಗವಾಡ: ಮಿರಜದ ಖ್ಯಾತ ಸ್ತ್ರೀರೋಗ ಮತ್ತು ಬಂಜೆತನ ನಿವಾರಣೆ ತಜ್ಞ ಡಾ.ಸಚಿನ ಸುಗನ್ನವರ ಅವರ ಸಚಿನ ಆಸ್ಪತ್ರೆಯಲ್ಲಿ ಆ. 11ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಮಹಿಳೆಯರ ಲೈಂಗಿಕ ರೋಗಗಳು ಹಾಗೂ ಬಂಜೆತನ ನಿವಾರಣೆ ಮತ್ತು ಉಪಚಾರ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ.

ಮಿರಜನ ಸಚಿನ ಟೆಸ್ಟ್‌ಟ್ಯೂಬ್ ಬೇಬಿ ಸೆಂಟರ್‌ನಲ್ಲಿ ಡಾ.ಸಚಿನ ಸುಗನ್ನವರ ಅವರು ಅನೇಕ ವರ್ಷಗಳಿಂದ ಬಂಜೆತನ ನಿವಾರಣೆ ಜತೆಗೆ ಸಂತಾನ ಭಾಗ್ಯ ಲಭಿಸದೆ ಇರುವ ದಂಪತಿಗೆ ಉಚಿತ ತಪಾಸಣೆ ಮತ್ತು ಉಪಚಾರ ನೀಡಿದ್ದಾರೆ.

ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ರಾಯಬಾಗ, ಅಥಣಿ ತಾಲೂಕು ಮತ್ತು ವಿಜಯಪುರ, ಬಾಗಲಕೋಟ ಜಿಲ್ಲೆಯ ಗ್ರಾಮಗಳಿಂದ ಸಾವಿರಾರು ದಂಪತಿ ಶಿಬಿರಗಳಲ್ಲಿ ಪಾಲ್ಗೊಂಡು ತೊಂದರೆ ನಿವಾರಿಸಿಕೊಳ್ಳುತ್ತಿದ್ದಾರೆ. ಸಂತಾನ ಹೀನ ದಂಪತಿಗೆ ಉಚಿತ ಉಪಚಾರ ಮತ್ತು ಕಡಿಮೆ ಖರ್ಚಿನಲ್ಲಿ ಶಸ್ತ್ರಚಿಕಿತ್ಸೆ ಮಾಡಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಮಾಹಿತಿಗೆ ಮೊ.ನಂ. 9765010834 ಸಂಪರ್ಕಿಸಬಹುದು.