ಜಿಲ್ಲೆ

ಜು.21ರಂದು ಬಂಜೆತನ ಉಚಿತ ತಪಾಸಣೆ: ಗರ್ಭಗುಡಿ ಸೆಂಟರ್‌ನ ಬಿಡಿಒ ಡಾರ್ವಿನ್ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಬೆಂಗಳೂರಿನ ಪ್ರಖ್ಯಾತ ಬಂಜೆತನ ನಿರ್ಮೂಲನಾ ಕೇಂದ್ರ ಗರ್ಭಗುಡಿ ಐವಿಎಫ್ ಸೆಂಟರ್ ವತಿಯಿಂದ ತಾರಾ ಡಯಾಗ್ನೋಸ್ಟಿಕ್ ಕೇಂದ್ರದ ಸಹಯೋಗದಲ್ಲಿ ಜು.21ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ರವರೆಗೆ ನಗರದ ತಾರಾ ಡಯಾಗ್ನೋಸ್ಟಿಕ್ ಕೇಂದ್ರದಲ್ಲಿ ಬಂಜೆತನ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಗರ್ಭಗುಡಿ ಸೆಂಟರ್‌ನ ಬಿಸಿನೆಸ್ ಡೆವಲಪ್ಮೆಂಟ್ ಆಫೀಸರ್(ಬಿಡಿಒ) ಡಾರ್ವಿನ್ ತಿಳಿಸಿದರು.

ಸಂತಾನೋತ್ಪತ್ತಿ ತಜ್ಞ ವೈದ್ಯೆ ಡಾ.ಆಶಾ ಎಸ್.ವಿಜಯ್ ಅವರ ತಂಡದವರಿಂದ ಶಿಬಿರ ಆಯೋಜಿಸಲಾಗಿದೆ. ನುರಿತ ವೈದ್ಯರಿಂದ ಉಚಿತ ವೈದ್ಯಕೀಯ ಸಲಹೆ, ತಪಾಸಣೆ, ವೀರ್ಯ ವಿಶ್ಲೇಷಣೆ ನಡೆಸಲಾಗುವುದು. ವಿವಾಹವಾಗಿ ಮಕ್ಕಳಾಗದ 45 ವರ್ಷದ ವಯೋಮಿತಿಯೊಳಗಿನವರು ಸದುಪಯೋಗಪಡಿಸಿಕೊಳ್ಳಬಹುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ತಾರಾ ಡಯಾಗ್ನೋಸ್ಟಿಕ್‌ನ ಪಿಆರ್‌ಒ ರಾಘವೇಂದ್ರ ಇದ್ದರು.